ಹೈದರಾಬಾದ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಎಸ್‌ಎಂಇ ವಲಯಕ್ಕೆ ನೀಡಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ರಿಯಾಯಿತಿ ಸಾಲ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಬಹುದು ಎಂದು ಇಬ್ಬರು ರಿಯಲ್ ಎಸ್ಟೇಟ್ ಡೆವಲಪರ್ಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರದ ಸಂಬಂಧ ಪರಿಹಾರ ಮಾರ್ಗಗಳನ್ನು ಘೋಷಣೆ ಮಾಡಿದ್ದಾರೆ. ಲೈಸನ್ಸ್ ಮಾನ್ಯತೆಯನ್ನು ವಿಸ್ತರಿಸುವ ಮೂಲಕ ನೆರವಾಗುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆಯಲಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಪೂರ್ಣ ಪ್ಯಾಕೇಜ್ ಪಡೆಯಲು ಬಯಸುತ್ತೇವೆ. ಶೀಘ್ರದಲ್ಲೇ ಈ ಬಗ್ಗೆ ನಿಖರವಾದ ಮಾಹಿತಿಯನ್ನು ಪ್ರಕಟಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಗೌರ್ಸನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ-ಎನ್‌ಸಿಆರ್ ಮೂಲದ ಎಟಿಎಸ್ ಸಮೂಹವು ಎಸ್‌ಎಂಇ ವಲಯದ ಪರಿಹಾರ ಪ್ಯಾಕೇಜ್ ಅನ್ನು ಸ್ವಾಗತಿಸಿದೆ ಹಾಗೆಯೇ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಇದೇ ರೀತಿಯ ಪರಿಹಾರ ಪ್ಯಾಕೇಜ್ನ್ನು ಕೋರಿದೆ. ಇದು ಎಲ್ಲರಿಗೂ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮುಂದಿನ ಸುತ್ತಿನಲ್ಲಿ ಇತರ ಕೈಗಾರಿಕೆಗಳೂ ಒಳಗೊಳ್ಳುತ್ತದೆ ಎಂದು ನಾವು ಅಂದುಕೊಂಡಿದ್ದೇವೆ ಎಂದು ಎಟಿಎಸ್ ವ್ಯವಸ್ಥಾಪಕ ನಿರ್ದೇಶಕ ಗೆಟಂಬರ್ ಆನಂದ್ ಹೇಳಿದ್ದಾರೆ.
ಸರ್ಕಾರವು ರಿಯಾಯಿತಿ ಸಾಲವನ್ನು ನೀಡಿದರಷ್ಟೇ ಸಾಲದು ಎಸ್‌ಎಂಇ ವಲಯದ ಸಾಲ ಮರುಪಾವತಿಯ ಮೇಲಿನ ನಿಷೇಧದ ಬಗ್ಗೆಯೂ ಘೋಷಣೆ ಮಾಡಬೇಕು ಎಂದು ಮನೋಜ್ ಆಗ್ರಹ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರವು ಆರ್ಥಿಕತೆಯ ಇತರ ಕೆಲವು ಕ್ಷೇತ್ರಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರಗಳ ವೆಚ್ಚವನ್ನು ಹೊಂದಿದೆ. ನಾವು ಹೆಚ್ಚಿನ 15-18% ಬಡ್ಡಿದರಗಳಲ್ಲಿ ಸಾಲ ಪಡೆಯಬೇಕಾಗಿದೆ. ಕೆಲವು ಸಂದರ್ಭಗಳಲ್ಲಿ ಇದು 20% ಅಥವಾ ಅದಕ್ಕಿಂತ ಹೆಚ್ಚಾಗಲಿದೆ. ಈ ಹಿನ್ನೆಲೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಎಂಸಿಎಲ್ಆರ್ ನಲ್ಲಿ ಸಾಲವನ್ನು ನೀಡಬೇಕು ಎಂದು ಮನೋಜ್ ಹೇಳಿದ್ದಾರೆ