ETV Bharat / bharat

13ನೇ ವಯಸ್ಸಿನಲ್ಲಿ ತರಕಾರಿ ವ್ಯಾಪಾರ ಆರಂಭಿಸಿದ ಮಹಿಳೆ; ಇಂದು ಇವರ ಆದಾಯ ಕೇಳಿದ್ರೆ ನೀವು ಬೆರಗಾಗ್ತೀರಾ? - ತರಕಾರಿ ಸಾಗಣೆಗೆ ಮಿನಿ ಟ್ರಕ್

ಗುಜರಾತ್​ನ ಅಹ್ಮದಾಬಾದ್​ ಮೂಲದ ವಿಮಲಾ ಬೆನ್​​ ಎಂಬ ಮಹಿಳೆ 13ನೇ ವಯಸ್ಸಿನಲ್ಲಿ ಚಿಕ್ಕದಾಗಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಶುರು ಮಾಡುತ್ತಾರೆ. ಹೀಗೆ ಸಣ್ಣಮಟ್ಟದಲ್ಲಿ ಆರಂಭವಾದ ಉದ್ಯಮ, ಇಂದು ಬೃಹದಾಕಾರವಾಗಿ ಬೆಳೆದಿದೆ.

vimala ben started a vegetable business
13ನೇ ವಯಸ್ಸಿನಲ್ಲಿ ತರಕಾರಿ ವ್ಯಾಪಾರ ಆರಂಭಿಸಿದ ಮಹಿಳೆ
author img

By

Published : Mar 8, 2020, 1:49 PM IST

ಅಹ್ಮದಾಬಾದ್(ಗುಜರಾತ್)​: ಇಂದು ಅಂತರರಾಷ್ಟ್ರೀಯ ಮಹಿಳಾ ದಿನ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಂದು ಛಾಪು ಮೂಡಿಸುತ್ತಿದ್ದಾರೆ. ಹೀಗೆ ಸಾಧನೆ ಮಾಡಿರುವ ಮಹಿಳೆಯೊಬ್ಬರ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ ನೋಡಿ.

ಶಿಕ್ಷಣವೆಂಬುದು ಎಲ್ಲರ ಬದುಕಿನ ದಾರಿ ದೀಪ. ಆದರೆ ಶಿಕ್ಷಣಕ್ಕಿಂತಲೂ ಮುಖ್ಯವಾದದ್ದು ವ್ಯಾವಹಾರಿಕ ಜ್ಞಾನ. ಹೌದು, ಎರಡೆರಡು ಡಿಗ್ರಿ ಪಡೆದಿದ್ದರೂ ವ್ಯವಹಾರದ ಸೂಕ್ಷ್ಮತೆಗಳನ್ನು ಅರಿಯದಿದ್ದರೆ ಆ ವಿದ್ಯೆಯೇ ವ್ಯರ್ಥ ಎಂದರೆ ತಪ್ಪಲ್ಲ. ಹಾಗೆಯೇ ನಾವಿಲ್ಲಿ ನಿಮಗೆ ಹೇಳ ಹೊರಟಿರುವುದು ಕಡಿಮೆ ಶಿಕ್ಷಣ ಪಡೆದು ಬದುಕಿನಲ್ಲಿ ಸಾಧನೆಯ ಶಿಖರವೇರಿರುವ ಮಹಿಳೆಯೊಬ್ಬರ ಯಶೋಗಾಥೆ.

13ನೇ ವಯಸ್ಸಿನಲ್ಲಿ ತರಕಾರಿ ವ್ಯಾಪಾರ ಆರಂಭಿಸಿದ ಮಹಿಳೆ

ಹೌದು, ಇವರ ಹೆಸರು ವಿಮಲಾ ಬೆನ್​ ರಾವಲ್​. ಗುಜರಾತ್​ನ ಅಹ್ಮದಾಬಾದ್​ ಮೂಲದ ಈಕೆ ಮಹತ್ತರವಾದುದನ್ನು ಸಾಧಿಸಲು ಕಾಲೇಜು ಶಿಕ್ಷಣವೇ ಬೇಕಿಲ್ಲ ಎಂದು ಸಾಧಿಸಿ ತೋರಿಸಿದವರು. ಹೌದು 7ನೇ ತರಗತಿಯಲ್ಲೇ ತಮ್ಮ ಶಿಕ್ಷಣವನ್ನು ಕೈಬಿಟ್ಟ ಇವರು ತಮ್ಮ 13ನೇ ವಯಸ್ಸಿನಲ್ಲಿ ತರಕಾರಿ ಮಾರಾಟ ಮಾಡಲು ಶುರು ಮಾಡಿದ್ದಾರೆ. ಮೊದಲು ತಳ್ಳುವ ಗಾಡಿಯಲ್ಲಿ ವ್ಯಾಪಾರ ಆರಂಭಿಸಿದ ರಾವಲ್, ನಂತರದ ದಿನಗಳಲ್ಲಿ ತರಕಾರಿ ಅಂಗಡಿ ತೆರೆಯುತ್ತಾರೆ. ನಂತರ ಇದರಲ್ಲೇ ಒಳ್ಳೆ ಲಾಭ ಕಂಡುಕೊಂಡು ಸ್ವಂತ ಮನೆಯನ್ನೂ ಖರೀದಿಸಿದರು. ಅಂದು ಸಣ್ಣಮಟ್ಟದಲ್ಲಿ ಆರಂಭಿಸಿದ ಉದ್ಯಮ ಇಂದು ಬೃಹದಾಕಾರವಾಗಿ ಬೆಳೆದಿದ್ದು ಇಂದಿನ ಇವರ ಸಂಪಾದನೆ ತಿಂಗಳಿಗೆ ಅಂದಾಜು 1 ಲಕ್ಷ ರೂಪಾಯಿ..! ಪಾನ್ ಕಾರ್ಡುದಾರರಾಗಿರುವ ಈಕೆ ಚಾಚೂ ತಪ್ಪದೆ ತರಿಗೆ ಕಟ್ಟುತ್ತಾರೆ.

ಹಾಗಂತ ಅವರು ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಬೆಳಿಗ್ಗೆ 4 ಗಂಟೆಗೆ ಎದ್ದೇಳುವ ಇವರು ತಮ್ಮ ದೈನಂದಿನ ವ್ಯಾಪಾರಕ್ಕಾಗಿ ಹೋಲ್​ಸೇಲ್​ ತರಕಾರಿ ಮಾರುಕಟ್ಟೆಯಾದ ಅಹ್ಮದಾಬಾದ್​ನ ಜಮಾಲ್ಪುರ ಹಾಗೂ ಕಾಲ್​ಪುರಕ್ಕೆ ತೆರಳಿ ಅಲ್ಲಿಂದ ತರಕಾರಿಗಳನ್ನು ತೆಗೆದುಕೊಂಡು ಬರುತ್ತಾರೆ. ತರಕಾರಿ ಸಾಗಣೆಗೆ ಮಿನಿ ಟ್ರಕ್ ಖರೀದಿಸಿದ್ದಾರೆ. ಅವರು ಆರಂಭಿಸಿದ ಈ ಕೆಲಸಕ್ಕೆ ಮಗ, ಸೊಸೆಯೂ ಸಾಥ್​ ನೀಡುತ್ತಿದ್ದಾರೆ.

ಸಾಧನೆಗೆ ವಯಸ್ಸು, ಭಾಷೆ, ಗಂಡು ಹೆಣ್ಣೆಂಬ ಭೇದವಿಲ್ಲ. ಸಾಧಿಸುವ ಛಲವೊಂದಿದ್ದರೆ ಆ ಛಲವೇ ಎಲ್ಲಾ ಗಡಿಗಳನ್ನು ದಾಟುವ ದಾರಿ ತೋರಿಸುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ ಮಾತಾಗುವುದಿಲ್ಲ. ಇದಕ್ಕೆ ವಿಮಲಾ ಬೆನ್​ ರಾವಲ್ ಸ್ಪಷ್ಟ ಉದಾಹರಣೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.