ಕರ್ನೂಲ್: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಂಧ್ರದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ಆಚರಿಸಲಾಗುವ ಬನ್ನಿ ಹಬ್ಬವನ್ನು ಈ ವರ್ಷ ರದ್ದುಗೊಳಿಸಲಾಗಿತ್ತು. ನಿಷೇಧದ ನಡುವೆಯೂ ಭಕ್ತರು ದೊಣ್ಣೆಯಿಂದ ಪರಸ್ಪರರ ತಲೆಗೆ ಬಡಿದುಕೊಳ್ಳುವ ಬನ್ನಿ ಹಬ್ಬ ಆಚರಿಸಿ ಹಲವರು ಗಾಯಗೊಂಡಿದ್ದಾರೆ.
ದೇವರಗಟ್ಟು ಗ್ರಾಮದ ದೇಗುಲದಲ್ಲಿ ದಸರಾ ಬನ್ನಿ ಹಬ್ಬದ ನಡುರಾತ್ರಿ ವೇಳೆ ನೂರಾರು ಮಂದಿ ಭಕ್ತರು ದೊಣ್ಣೆಯಿಂದ ಪರಸ್ಪರ ತಲೆಗೆ ಬಡಿದುಕೊಳ್ಳುತ್ತಾರೆ. ಶಿವ ಅಸುರನೊಬ್ಬನನ್ನು ಸಂಹರಿಸಿದ ಪ್ರತೀಕವಾಗಿ ಈ ಆಚರಣೆಯ ವೇಳೆ ಭಕ್ತರ ನೆತ್ತಯಿಂದ ರಕ್ತ ಜಿನುಗುತ್ತಿರುತ್ತದೆ. ಪೊಲೀಸರು, ಸ್ಥಳೀಯ ಜನಪ್ರತಿನಿಧಿಗಳು ಇದೆಲ್ಲವನ್ನೂ ಮೂಕ ಪ್ರೇಕ್ಷಕರಾಗಿ ನೋಡುತ್ತಾರೆ. ಪ್ರತೀ ವರ್ಷ ತೀವ್ರ ಪೆಟ್ಟಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚುತಲೇ ಇದೆ. ಆದರೆ, ಆಚರಣೆ ಮಾತ್ರ ನಿಂತಿಲ್ಲ.
-
#WATCH: People in large numbers gather to celebrate Banni festival in Devaragattu village of Kurnool district despite the imposition of Section 144 in the area, yesterday.
— ANI (@ANI) October 27, 2020 " class="align-text-top noRightClick twitterSection" data="
At least 50 persons were injured during the festival. #AndhraPradesh pic.twitter.com/6LAWdKuwg9
">#WATCH: People in large numbers gather to celebrate Banni festival in Devaragattu village of Kurnool district despite the imposition of Section 144 in the area, yesterday.
— ANI (@ANI) October 27, 2020
At least 50 persons were injured during the festival. #AndhraPradesh pic.twitter.com/6LAWdKuwg9#WATCH: People in large numbers gather to celebrate Banni festival in Devaragattu village of Kurnool district despite the imposition of Section 144 in the area, yesterday.
— ANI (@ANI) October 27, 2020
At least 50 persons were injured during the festival. #AndhraPradesh pic.twitter.com/6LAWdKuwg9
ಈ ಪ್ರದೇಶದಲ್ಲಿ ಸೆಕ್ಷನ್ 144 ಹೇರಿದ್ದರೂ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ಬನ್ನಿ ಹಬ್ಬವನ್ನು ಆಚರಿಸಲು ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಜನರ ನಿಯಂತ್ರಣಕ್ಕೆ ಆಂಧ್ರಪ್ರದೇಶ, ಕರ್ನಾಟಕ ಗಡಿಯಲ್ಲಿ 11 ಚೆಕ್ಪೋಸ್ಟ್ಗಳನ್ನ ಸ್ಥಾಪಿಸಲಾಗಿತ್ತು.
ಆಲೂರು, ಹೊಲಗೊಂಡ, ಹಲಹರ್ವಿ ಮಂಡಲಗಳಿಗೆ ಕೆಎಸ್ಆರ್ಟಿಸಿ ಬಸ್ಗಳನ್ನ ನಿರ್ಬಂಧಿಸಲಾಗಿತ್ತು. ಆದರೂ ಜನರು ಬನ್ನಿ ಹಬ್ಬ ಆಚರಣೆಗೆ ಸ್ವಂತ ವಾಹನಗಳ ಮೂಲಕ ಆಗಮಿಸಿದ್ದರು. ಈ ಹಿನ್ನೆಲೆ ದೇವರಗಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. ಅಡೆಚಣೆ ಹಾಗೂ ನಿರ್ಬಂಧದ ನಡುವೆಯೂ ಇಂದು ಬನ್ನಿ ಆಚರಣೆ ನಡೆಯಿತು.