ಮೇಷ: ಇಂದು ನಿಮ್ಮ ಬಾಗಿಲನ್ನು ಸುವರ್ಣಾವಕಾಶವು ಬಡಿಯುತ್ತದೆ. ನೀವು ಉತ್ತಮ ಅದೃಷ್ಟವನ್ನು ಭವಿಷ್ಯಕ್ಕೆ ಉಳಿಸುವಲ್ಲಿ ಯಶಸ್ವಿಯಾಗಲೂಬಹುದು. ಸದ್ಯದಲ್ಲೇ ನೀವು ನಿಮ್ಮ ದಾರಿಯಲ್ಲಿ ಬರುವ ಹೆಚ್ಚು ಒಪ್ಪಂದಗಳ ಮೂಲಕ ನಿಮ್ಮ ವ್ಯಾಪಾರದ ಮೈಲಿಗಲ್ಲುಗಳನ್ನು ರೂಪಿಸಿಕೊಳ್ಳಲು ಶಕ್ತರಾಗುತ್ತೀರಿ. ನೀವು ಹಾಕುವ ಪ್ರಯತ್ನಗಳಿಗೆ ಅನುಗುಣವಾಗಿ ನೀವು ಪ್ರತಿಫಲವನ್ನು ಪಡೆಯುತ್ತೀರಿ.
ವೃಷಭ: ಇಂದು ನೀವು ಕೆಲ ಲೆಕ್ಕಾಚಾರದ ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳು ಅಗತ್ಯವಾಗಬಹುದು. ನಿಮಗೆ ಹೊಡೆತ ನೀಡುವ ಯಾವುದೇ ಕಹಿ ಆಲೋಚನೆಗಳಿಂದ ನೀವು ದೂರ ಉಳಿಯಲು ಬಯಸಬಹುದು. ಆದರೆ, ಈ ದಿನದ ಅಂತ್ಯಕ್ಕೆ ನೀವು ಕುಳಿತು ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.
ಮಿಥುನ: ನಿಮ್ಮ ಆ ಒಂದು ಕ್ರಿಯೆ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಿ. ಇತರರು ನಿಮ್ಮ ಕುರಿತು ತಪ್ಪು ತಿಳಿವಳಿಕೆ ಹೊಂದುವ ಸಾಧ್ಯತೆ ಇದೆ. ನಿಮ್ಮಷ್ಟಕ್ಕೆ ನೀವು ಕೊಂಚ ಸಮಯ ಕಳೆಯುವುದು ನಿಮಗೆ ಉಪಯುಕ್ತ ಎಂದು ಕಾಣುತ್ತೀರಿ. ಅದಲ್ಲದೆ, ನೀವು ವಿರುದ್ಧ ಲಿಂಗದ ಮಿತ್ರರೊಂದಿಗೆ ಧಾರಾಳವಾಗಿ ಖರ್ಚು ಮಾಡುವ ಮೂಲಕ ಅವರನ್ನು ಪ್ರಭಾವಿತಗೊಳಿಸುತ್ತೀರಿ.
ಕರ್ಕಾಟಕ: ನೀವು ನಿಮ್ಮ ಪ್ರೀತಿಪಾತ್ರರ ಕುರಿತು ಬಹಳ ಕಾಳಜಿ ವಹಿಸುತ್ತೀರಿ ಮತ್ತು ಆದ್ದರಿಂದ ನೀವು ಅವರ ಕುರಿತು ಏನು ಭಾವಿಸುತ್ತೀರಿ ಎಂದು ಹೇಳದೆ ಅವರ ಭಾವನೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತೀರಿ. ಮಧ್ಯಾಹ್ನ ಸಣ್ಣ ಪ್ರವಾಸದ ಮೇಲೆ ನಗರವನ್ನು ಬಿಡಲು ಉತ್ಸಾಹ ನೀಡುವ ಸಾಹಸ ತರಲಿದೆ. ಲೋಲುಪತೆಗೆ ನೀವು ಗಮನ ನೀಡುವುದಿಲ್ಲ ಮತ್ತು ನೀವು ಚೆನ್ನಾಗಿ ಕಾಣಲು ಒಳ್ಳೆಯ ಮೊತ್ತವನ್ನು ಖರ್ಚು ಮಾಡುತ್ತೀರಿ.
ಸಿಂಹ: ಈ ದಿನ ಮತ್ತಾವುದೇ ದಿನದಂತಲ್ಲ! ಸಂಪತ್ತು ಮತ್ತು ಅದೃಷ್ಟ, ಎರಡೂ ನಿಮಗೆ ಇಂದು ಜೊತೆಯಾಗಿರುವಂತೆ ಕಾಣುತ್ತಿದೆ. ಹಣ ಮತ್ತು ಅಧಿಕಾರ ಅನಿವಾರ್ಯವಾದವು. ದಿನ ಮುಂದಕ್ಕೆ ಸಾಗಿದಂತೆ, ನೀವು ನಿಮ್ಮಗಮನಾರ್ಹ ವ್ಯಕ್ತಿಗೆ ಉತ್ತಮ ಆಭರಣ ಕೊಡಿಸಲು ದುಬಾರಿಯಾಗಿ ಖರ್ಚು ಮಾಡಲು ಬಯಸುತ್ತೀರಿ. ಅದೇ ಸಮಯಕ್ಕೆ, ನಿಮ್ಮ ಹಣ ಎಲ್ಲಿಗೆ ಹೋಗುತ್ತದೆ ಎನ್ನುವುದರ ಕುರಿತು ಕೊಂಚ ಎಚ್ಚರದಿಂದಿರಿ. ನಿಮ್ಮ ಹಣಕಾಸಿನ ವ್ಯವಹಾರಗಳ ಕುರಿತು ಹತ್ತಿರದಿಂದ ನೋಡುವುದು ಅಗತ್ಯ.
ಕನ್ಯಾ: ನಿಮ್ಮ ಕುಟುಂಬ ಇಂದು ನಿಮ್ಮ ಸಂತೋಷದ ಮನಸ್ಥಿತಿಯನ್ನು ನಿರ್ಧರಿಸಲಿದೆ. ಇದರಿಂದಾಗಿ, ನೀವು ಅವರೊಂದಿಗೆ ಕಾಲ ಕಳೆಯಲು ಮತ್ತು ಅವರಿಗೆ ದುಬಾರಿ ಉಡುಗೊರೆಗಳನ್ನು ಕೊಡಿಸಿ ಸಂತೋಷಪಡಿಸಲು ಪ್ರಯತ್ನಿಸುತ್ತೀರಿ. ದಿನದ ನಂತರದಲ್ಲಿ, ನೀವು ಪ್ರಣಯದಲ್ಲಿ ತೊಡಗಿಕೊಳ್ಳಲು ಬಯಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.
ತುಲಾ: ನಿಮ್ಮ ದಿನ ಅದೃಷ್ಟದಿಂದ ಕೂಡಿರುವಂತೆ ಕಾಣುತ್ತದೆ. ನ್ಯಾಯಾಲಯದ ಹೊರಗೆ ಒಪ್ಪಂದಗಳಿಂದ ಕಾನೂನು ಸಂಘರ್ಷಗಳು ಮುಂಚೆಯೇ ಇತ್ಯರ್ಥವಾಗುವ ಸಾಧ್ಯತೆಗಳಿವೆ. ಮಧ್ಯಾಹ್ನದಲ್ಲಿ, ನೀವು ಯಾರದೋ ದೃಷ್ಟಿಕೋನಕ್ಕೆ ನಿಮ್ಮನ್ನು ನೀವು ಶರಣಾಗಿಸಲು ಒಪ್ಪುವುದಿಲ್ಲ. ವೈಯಕ್ತಿಕ ಬಾಂಧವ್ಯಗಳ ಕುರಿತಂತೆ, ನೀವು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತೀರಿ.
ವೃಶ್ಚಿಕ: ನಿಮ್ಮ ಈ ದಿನ ಸಂಪೂರ್ಣ ಕುಣಿ ಕುಣಿದಾಡುವ ದಿನವಾಗಿದೆ. ನೀವು ಇಡೀ ದಿನ ನಾಗಾಲೋಟದಲ್ಲಿರುವ ಸಾಧ್ಯತೆ ಇದೆ. ನಿಮ್ಮ ಬಹುತೇಕ ಆಲೋಚನೆಗಳು ವ್ಯಾಪಾರ ಸಭೆಗಳು ಮತ್ತು ಅಪೂರ್ಣ ವಿಷಯಗಳ ಸುತ್ತ ಸುತ್ತುತ್ತಿರುತ್ತದೆ. ಆದರೆ ದಿನದ ಅಂತ್ಯಕ್ಕೆ, ನೀವು ನಿಮ್ಮ ಪ್ರಸ್ತಾವನೆ ಒಂದು ರೂಪ ಪಡೆಯುವ ಮತ್ತು ಪ್ರತಿಫಲ ನೀಡುವುದನ್ನು ಕಾಣಬಹುದು.
ಧನು: ಅನಾವರಣ ಮಾಡುವ ಕಾಲ ಅಂತಿಮವಾಗಿ ಬಂದಿದೆ! ಹಲವು ಮಹತ್ತರ ವಿಸ್ಮಯಗಳು ತೆರೆದುಕೊಳ್ಳಲಿವೆ ಮತ್ತು ಅಂತಿಮವಾಗಿ ನೀವು ನಿಮ್ಮ ಗಮನ ಅಗತ್ಯವಾಗಿರುವ ವಿಷಯಗಳ ನೇರ ಮುಖಾಮುಖಿಯಾಗುತ್ತೀರಿ. ಇಂದು ನೀವು ನಿರ್ಮಿಸಿಕೊಳ್ಳುವ ಯಾವುದೇ ಬಾಂಧವ್ಯ, ಜೀವನಪೂರ್ತಿ ಉಳಿಯುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅತ್ಯಂತ ಉತ್ತಮವಾಗಿ ಸಂಪರ್ಕ ಪಡೆದುಕೊಳ್ಳಲು ಶಕ್ತರಾಗುತ್ತೀರಿ ಮತ್ತು ಕೃತಜ್ಞತೆಯಿಂದ ತುಂಬಿರುತ್ತೀರಿ. ನೀವು ಭಾವಿಸುವ ಪ್ರೀತಿ ಭೌತಿಕ ಪ್ರೀತಿಗಿಂತ ಹೆಚ್ಚಿನದಾಗಿದೆ.
ಮಕರ: ನಿರೀಕ್ಷೆಗಳು ಮಿಶ್ರ ಭಾವನೆಗಳನ್ನು ಮೂಡಿಸುತ್ತವೆ! ನಿಮ್ಮಿಂದ ಮತ್ತು ಸುತ್ತಲಿನವರಿಂದ ನೀವು ಅಪಾರವಾಗಿ ನಿರೀಕ್ಷೆ ಮಾಡುವಾಗ, ನಿರೀಕ್ಷಿತ ಫಲಿತಾಂಶಗಳನ್ನು ನೀವು ಪಡೆಯದೇ ಇರಬಹುದು. ಹಣ ಖರ್ಚು ಮಾಡುವುದು ಕ್ಲಿಷ್ಟವಾಗುತ್ತದೆ ಮತ್ತು ನೀವು ಕಡಿಮೆ ಖರ್ಚು ಮಾಡಲು ಬಯಸುತ್ತೀರಿ. ಆದಾಗ್ಯೂ, ಸಾಮಾಜಿಕವಾಗಿ ಈ ಮಾದರಿ ನಿಮ್ಮ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುತ್ತದೆ.
ಕುಂಭ: ನಿಮ್ಮ ಕೆಲಸದಲ್ಲಿ ಅತ್ಯಂತ ಪ್ರಮುಖ ದಿನಗಳಲ್ಲಿ ಒಂದಾಗಿರುವುದರಿಂದ ಶಿಸ್ತಾಗಿ ಬಟ್ಟೆ ತೊಟ್ಟು ಹೊರಡಿ. ಇದು ಪ್ರಭಾವಗೊಳಿಸುವ ದಿನ ಮತ್ತು ಆದ್ದರಿಂದ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಣರಾಗಿರುವುದು ಮುಖ್ಯ. ದಿಢೀರ್ ನಿರ್ಣಯಗಳಿಗೆ ಬರುವುದು ಋಣಾತ್ಮಕ ಪರಿಣಾಮ ಬೀರುತ್ತದೆ, ಆದ್ದರಿಂದ ಎಚ್ಚರದಿಂದಿರಿ.
ಮೀನ: ಇಂದು ಉತ್ಸಾಹ ಮತ್ತು ಹುರುಪು ತುಂಬಿದ ಉಜ್ವಲ ದಿನ. ನೀವು ಹೊಸ ಜನರನ್ನು ಭೇಟಿಯಾಗುವ ಮೂಲಕ ನಿಮ್ಮ ಸಾಮಾಜಿಕ ವೃತ್ತವನ್ನು ಬೆಳೆಸಿಕೊಳ್ಳಬಹುದು ಅಥವಾ ನಿಮ್ಮ ವಿಶೇಷ ವ್ಯಕ್ತಿಯೊಂದಿಗೆ ಕಾಲ ಕಳೆಯಬಹುದು. ಯಾವುದೇ ನವೋತ್ಸಾಹ ತುಂಬುವ ವಸ್ತುಗಳು ನಿಮ್ಮ ಶಕ್ತಿ, ಡೈನಮಿಸಂ ಮತ್ತು ಸಾಮರ್ಥ್ಯಕ್ಕೆ ಕೆಲಸ ಮಾಡುವುದಿಲ್ಲ. ಕೆಲಸದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಯೋಜನೆಗಳನ್ನು ತೆಗೆದುಕೊಳ್ಳಲು ನೀವು ಭಯಪಡುವ ಸಾಧ್ಯತೆ ಇದೆ.