ಹೈದರಾಬಾದ್: ಶ್ವಾಸಕೋಶದ ತಜ್ಞರ ಪ್ರಕಾರ ಆಸ್ತಮಾ ಮತ್ತಿತರ ಶ್ವಾಸಕೋಶದ ತೊಂದರೆಗಳಿಂದ ಬಾಧಿತರಾದವರು ಮಾರಣಾಂತಿಕ ಕೊವಿಡ್ -19 ಸೋಂಕಿನಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ . ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು ಉಸಿರಾಟದ ತೊಂದರೆಗಳಿಗೆ ಒಳಗಾಗುವವರು ಕೊವಿಡ್-19 ಕಾಯಿಲೆಗೆ ಹೆಚ್ಚು ತುತ್ತಾಗುತ್ತಿದ್ದಾರೆ.
ಕೊರೊನಾವೈರಸ್ ಸೋಂಕಿನ ಈ ಕಾಯಿಲೆ ನ್ಯುಮೋನಿಯಾ ತರದ ಸೋಂಕನ್ನು ಉಂಟು ಮಾಡುತ್ತದೆ. ಇದರಲ್ಲಿ ಸಾಧಾರಣ ಮಟ್ಟದ ರೋಗಲಕ್ಷಣಗಳಿಂದ ಹಿಡಿದು ಜೀವಕ್ಕೇ ಅಪಾಯವಾಗುವಂತಹ ತೊಂದರೆಗಳು ಸಹ ಉಂಟಾಗಬಹುದಾಗಿದೆ.
ಅಮೆರಿಕನ್ ಲಂಗ್ ಅಸೋಸಿಯೇಷನ್ ಪ್ರಕಾರ ಅಸ್ತಮಾ ಮತ್ತು ಕ್ರೋನಿಕ್ ಅಬ್ಸ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಕಾಯಿಲೆ ಇರುವವರು ಕೊವಿಡ್ -19 ಸೋಂಕಿನ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಸಿದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ಅಂತಹ ವ್ಯಕ್ತಿಗಳು ಸಾಮಾಜಿಕ ಅಂತರ ಪಾಲಿಸುವ ಜೊತೆಗೆ ಕೈ ತೊಳೆದುಕೊಳ್ಳುತ್ತಿರಬೇಕಲ್ಲದೆ ಯಾವುದೇ ಕಾರಣಕ್ಕೂ ಕೊರೊನಾವೈರಸ್ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬರದ ರೀತಿಯಲ್ಲಿ ಅಂತರ ಕಾಪಾಡಿಕೊಳ್ಳಬೇಕು.
ಶ್ವಾಸಕೋಶದ ಸೋಂಕು ಹೆಚ್ಚಿದರೆ ಈಗಾಗಲೇ ಒತ್ತಡಕ್ಕೆ ಒಳಗಾಗಿರುವ ಆರೋಗ್ಯ ಮೂಲಸೌಕರ್ಯದ ಮೇಲೆ ಮತ್ತಷ್ಟು ಒತ್ತಡ ನಿರ್ಮಿಸುತ್ತದೆ ಎಂಬುದನ್ನು ಶ್ರೀಮಂತ ದೇಶಗಳ ಅನುಭವ ತೋರಿಸಿದೆ. ನೊವೆಲ್ ಕೊರೊನಾವೈರಸ್ ವಿಷಯದಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳು ಸಹ ಅಪಾಯದಲ್ಲಿರುತ್ತಾರೆ. "ಸಿಗರೇಟು ಸೇದುವುದು ಮತ್ತು ವೇಪಿಂಗ್ ಶ್ವಾಸಕೋಶದ ಊತಕ್ಕೆ ಸಂಬಂಧಿಸಿದ್ದು ಶ್ವಾಸಕೋಶದ ನಾಳಗಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುತ್ತದೆ, ಇದೆರಡೂ ಸಹ ಕೊರೊನಾವೈರಸ್ ಸೋಂಕಿನ ಸಂದರ್ಭದಲ್ಲಿ ಹೆಚ್ಚಿನ ತೊಂದರೆ ಉಂಟುಮಾಡುತ್ತವೆ" ಎಂದು ಎಎಲ್ಎ ತಿಳಿಸಿದೆ.