ಬಾರ್ಪೆಟಾ(ಅಸ್ಸೋಂ): ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್(ಜೆಎಂಬಿ) ಉಗ್ರಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಅಸ್ಸೋಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ
ಅಸ್ಸೋಂನ ಬಾರ್ಪೆಟಾ ಜಿಲ್ಲೆಯ ರೌಮಾರಿಯಲ್ಲಿ ತಲೆಮರೆಸಿಕೊಂಡಿದ್ದ ಜೆಎಂಬಿ ಉಗ್ರ ಅಜರುದ್ದೀನ್ ಅಹ್ಮದ್, ಬುರ್ಧ್ವಾನ್ ಬ್ಲಾಸ್ಟ್ನಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
2013ರಲ್ಲಿ ಅಜರುದ್ದೀನ್, ಜೆಎಂಬಿ ಭಯೋತ್ಪಾದಕ ಸಂಘಟನೆ ಸೇರಿಕೊಂಡಿದ್ದ. ಅಸ್ಸೋಂ ಪೊಲೀಸ್ ಹಾಗೂ ಎನ್ಐಎಯ ಮೋಸ್ಟ್ ವಾಟೆಂಡ್ ಉಗ್ರರ ಲಿಸ್ಟ್ನಲ್ಲಿದ್ದ ಅಜರುದ್ದೀನ್ನನ್ನು ಕೊನೆಗೂ ಬಂಧಿಸಲಾಗಿದೆ.
ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಅಜರುದ್ದೀನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಗ್ರನನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.