ಹೋಶಿಯಾರ್‌ಪುರ(ಪಂಜಾಬ್) : ಇಲ್ಲಿನ ಹೋಶಿಯಾರ್‌ಪುರ-ಉನಾ ರಸ್ತೆಯ ಮೂಲಕ ವಾಹನಗಳು ಹಾದುಹೋಗಲು ಹಣ ತೆಗೆದುಕೊಂಡ ಆರೋಪದ ಮೇಲೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಹೋಂ ಗಾರ್ಡ್‌ಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.
ಸದರ್ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡಿರುವ ಎಎಸ್‌ಐ ಅಶ್ವನಿಕುಮಾರ್ ಮತ್ತು ಹೋಂ ಗಾರ್ಡ್‌ಗಳಾದ ಬಲ್ವಂತ್ ಸಿಂಗ್ ಮತ್ತು ಬಲದೇವ್ ಸಿಂಗ್ ಅವರನ್ನು ಆರೋಪ ಕೇಳಿ ಬಂದ ಬಳಿಕ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಜೊತೆಗೆ ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೋಶಿಯಾರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗರ್ಗ್ ತಿಳಿಸಿದ್ದಾರೆ.
ಪಂಜಾಬ್-ಹಿಮಾಚಲ ಪ್ರದೇಶದ ಗಡಿಯಲ್ಲಿರುವ ಚಕ್‌ಸಾಧು ಗ್ರಾಮದ ಪೊಲೀಸ್ ಚೆಕ್ ಪೋಸ್ಟ್‌ನಲ್ಲಿನ ಹೋಶಿಯಾರ್‌ಪುರ-ಉನಾ ರಸ್ತೆಯಲ್ಲಿ ಚಲಿಸುವ ಪ್ರತಿ ವಾಹನದಿಂದ ಅವರು 100 ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ತಲ್ವಿಂದರ್ ಸಿಂಗ್ ಅವರು ಮೂವರೂ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲು ಶಿಫಾರಸು ಮಾಡಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದರು.