ETV Bharat / bharat

ಅಜ್ಞಾನಕ್ಕಿಂತ ದುರಂಹಕಾರವೇ ಹೆಚ್ಚು ಅಪಾಯಕಾರಿ.. ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ - ಮೋದಿ ಸರ್ಕಾರದ ವಿರುದ್ಧ ರಾಹುಲ್ ಟ್ವೀಟ್

ಲಾಕ್​ಡೌನ್​ ಹೇರುವ ಮೂಲಕ ಕೊರೊನಾ ಸೋಂಕು ತಡೆಯುವ ಸರ್ಕಾರದ ಪ್ರಯತ್ನವನ್ನು ರಾಹುಲ್​ ಗಾಂಧಿ ಟೀಕಿಸಿದ್ದಾರೆ. ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಇದನ್ನು ಸರ್ಕಾರದ ವೈಫಲ್ಯ ಎಂದಿದ್ದಾರೆ.

Arrogance more dangerous than ignorance
ಕೇಂದ್ರದ ವಿರುದ್ಧ ರಾಹುಲ್ ಕಿಡಿ
author img

By

Published : Jun 15, 2020, 5:14 PM IST

ನವದೆಹಲಿ : ಅಜ್ಞಾನಕ್ಕಿಂತ ದುರಹಂಕಾರವೇ ಹೆಚ್ಚು ಅಪಾಯಕಾರಿ ಎಂಬ ವಿಶ್ವಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್​ ಅವರ ಉಲ್ಲೇಖವನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅಜ್ಞಾನಕ್ಕಿಂತ ದುರಂಹಕಾರವೇ ಹೆಚ್ಚು ಅಪಾಯಕಾರಿ ಎಂಬುದನ್ನು ಈ ಲಾಕ್​ಡೌನ್​ ಸಾಬೀತುಪಡಿಸುತ್ತದೆ ಎಂದಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಮತ್ತು ಆರ್ಥಿಕತೆ ಹೇಗೆ ಕುಸಿಯುತ್ತಿದೆ ಎಂದು ತೋರಿಸುವ ಗ್ರಾಫ್ ಇರುವ ವಿಡಿಯೋವನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ.

  • This lock down proves that:

    “The only thing more dangerous than ignorance is arrogance.”
    Albert Einstein pic.twitter.com/XkykIxsYKI

    — Rahul Gandhi (@RahulGandhi) June 15, 2020 " class="align-text-top noRightClick twitterSection" data=" ">

ಲಾಕ್​ಡೌನ್​ ಹೇರುವ ಮೂಲಕ ಕೊರೊನಾ ಸೋಂಕು ತಡೆಯುವ ಸರ್ಕಾರದ ಪ್ರಯತ್ನವನ್ನು ರಾಹುಲ್​ ಗಾಂಧಿ ಟೀಕಿಸಿದ್ದಾರೆ. ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಇದನ್ನು ಸರ್ಕಾರದ ವೈಫಲ್ಯ ಎಂದಿದ್ದಾರೆ.

ಸರ್ಕಾರವು ದುರಂಹಕಾರದಿಂದ ವರ್ತಿಸುತ್ತಿದೆ. ಪ್ರತಿಪಕ್ಷಗಳ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈಗಿನ ಆರ್ಥಿಕ ಪರಿಸ್ಥಿತಿಗೆ ಸರ್ಕಾರವೇ ಹೊಣೆಯಾಗಿದೆ. ಆರ್ಥಿಕತೆಯ ಪುನರುಜ್ಜೀವನ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ನೆರವು ಒದಗಿಸಬೇಕು ಎಂದಿದ್ದಾರೆ ರಾಹುಲ್‌ ಗಾಂಧಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.