ಕೋಲ್ಕತ್ತಾ: ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಕೋಲ್ಕತ್ತಾದ ನ್ಯಾಯಾಲಯವೊಂದು ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಶಶಿ ತರೂರ್ 'ಹಿಂದೂ ಪಾಕಿಸ್ತಾನ' ರಚನೆ ಬಗ್ಗೆ ನೀಡಿದ್ದ ಹೇಳಿಕೆ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ಕೋಲ್ಕತ್ತಾದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಶಶಿ ತರೂರ್ ವಿರುದ್ಧ ಬ್ಯಾಂಕ್‌ಶಾಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ತರೂರ್ ಮಾಡಿದ ಟೀಕೆ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಸಂವಿಧಾನವನ್ನು ಅವಮಾನಿಸಿದೆ ಎಂದು ಆರೋಪಿಸಿ ವಕೀಲ ಸುಮೀತ್ ಚೌಧರಿ ಪ್ರಕರಣ ದಾಖಲಿಸಿದ್ದರು.