ಬರ್ಪೇಟಾ (ಅಸ್ಸಾಂ): ಮಹಿಳೆಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಯೋಧರು ನೀರಿಗೆ ಹಾರಿ ರಕ್ಷಿಸಿದ ಘಟನೆ ಬರ್ಪೇಟಾ ಜಿಲ್ಲೆಯ ಪಟ್ಬೌಶಿ ಎಂಬಲ್ಲಿ ನಡೆದಿದೆ.
ಪಟ್ಬೌಶಿಯ ನಕಂದಾ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಅಲ್ಲೇ ಸಮೀಪದ ಸೇನಾ ಕ್ಯಾಂಪ್ನಲ್ಲಿದ್ದ ಯೋಧರಾದ ಸುಬೇದಾರ್ ಲಯಕ್ ರಾಮೋಹೆ ಮತ್ತು ಹವಿಲ್ದಾರ್ ಅಶೋಕ್ ಕುಮಾರ್ ನದಿಗೆ ಹಾರಿ ಆಕೆಯನ್ನು ರಕ್ಷಿಸಿದ್ದಾರೆ.
ಯೋಧರ ಸಮಯ ಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.