ETV Bharat / bharat

ಐಇಡಿ ವಶಪಡಿಸಿಕೊಂಡ ರಾಷ್ಟ್ರೀಯ ರೈಫಲ್ಸ್​: ಉಗ್ರರ ಸಂಚು ವಿಫಲ - ರಜೌರಿ ಜಿಲ್ಲೆ

ಸುಧಾರಿತ ಸ್ಫೋಟಕವನ್ನು ರಾಷ್ಟ್ರೀಯ ರೈಫಲ್ಸ್​ನ ತುಕಡಿಯೊಂದು ವಶಪಡಿಸಿಕೊಂಡು ಉಗ್ರರ ಸಂಭಾವ್ಯ ದಾಳಿಯ ಸಂಚು ವಿಫಲಗೊಳಿಸಿದೆ.

IED
ಐಇಡಿ
author img

By

Published : Aug 4, 2020, 10:24 AM IST

ಶ್ರೀನಗರ (ಜಮ್ಮು ಕಾಶ್ಮೀರ): 29ನೇ ರಾಷ್ಟ್ರೀಯ ರೈಫಲ್ಸ್​​ನ(ಆರ್​ಆರ್​​) ತುಕಡಿಯಿಂದ ಶ್ರೀನಗರ ಹಾಗೂ ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿ ಬಳಿ ಇಟ್ಟಿದ್ದ ಐಇಡಿ ಸ್ಫೋಟಕವನ್ನು ವಶಪಡಿಸಿಕೊಂಡು, ಉಗ್ರರ ದಾಳಿ ವಿಫಲಗೊಳಿಸಿದೆ.

ಇದೇ ವೇಳೆ, ಇಂದೂ ಕೂಡ ಪೂಂಚ್​ ಜಿಲ್ಲೆಯ ಕೃಷ್ಣಘಾಟಿ ಸೆಕ್ಟರ್​ನಲ್ಲಿ ಪಾಕ್​ ಸೇನೆ ಲಘು ಶಸ್ತ್ರಾಸ್ತಗಳಿಂದ ಕದನ ವಿರಾಮ ಉಲ್ಲಂಘನೆ ಮಾಡಿ, ಅಪ್ರಚೋದಿತ ದಾಳಿ ನಡೆಸಿದೆ.

IED
ಐಇಡಿ

ಇದಕ್ಕೂ ಮೊದಲು ಆಗಸ್ಟ್​ 1ರಂದು ರಜೌರಿ ಜಿಲ್ಲೆಯ ಲೈನ್​ ಆಫ್​ ಕಂಟ್ರೋಲ್​ ಬಳಿ ಪಾಕ್​ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಸೇನೆಯ ಯೋಧ ಸಿಪಾಯ್​ ರೋಹಿನ್​ ಕುಮಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಹುತಾತ್ಮನಾಗಿದ್ದರು.

ಪಾಕಿಸ್ತಾನ ದಿನಕ್ಕೆ ಎರಡು ಬಾರಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಸೇನಾ ಪೋಸ್ಟ್​ಗಳ ಮೇಲೆ ಹಾಗೂ ಎಲ್​ಒಸಿ ಬಳಿಯ ಗ್ರಾಮಗಳ ಮೇಲೆ ದಾಳಿ ನಡೆಸುತ್ತಿದೆ.

ಜುಲೈ 18ರಂದು ಪಾಕ್​ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಜುಲೈ 10ರಂದು ಒಬ್ಬ ಯೋಧ ಹುತಾತ್ಮನಾಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.