ನವದೆಹಲಿ: ಚೌಕೀದಾರ್ ಚೋರ್ ಹೇಳಿಕೆ ಕುರಿತಂತೆ ವಿವಾದದಲ್ಲಿ ಸಿಲುಕಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ತಮ್ಮ ಹೇಳಿಕೆ ಕುರಿತಂತೆ ರಾಹುಲ್ ಅವರು ನೀಡಿರುವ ವಿಷಾದದ ನೋಟ್ನಿಂದ ತೃಪ್ತವಾಗದ ಕೋರ್ಟ್, ರಾಹುಲ್ ವಿರುದ್ಧ ನೋಟಿಸ್ ಜಾರಿ ಮಾಡಿರುವುದಾಗಿ ದೂರುದಾರರಾದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಪರ ವಕೀಲ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ.
ರಫೇಲ್ ಡೀಲ್ ವಿಷಯ ಇನ್ನೂ ಸುಪ್ರೀಂ ಕೋರ್ಟ್ನಲ್ಲಿರುವಾಗಲೇ ಮೋದಿ ಅವರು ಈ ಪ್ರಕರಣದ ಆರೋಪಿ ಎಂದು ಸಾರ್ವಜನಿಕವಾಗಿ ಹೇಳಿದ್ದ ಕಾರಣ, ಲೇಖಿ ಅವರು ಸುಪ್ರೀಂ ಕೋರ್ಟ್ಗೆ ದೂರು ನೀಡಿದ್ದರು. ಅರ್ಜಿ ಪರಿಶೀಲಿಸಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದೆ.