ತೆಲಂಗಾಣ: ಬುಡಕಟ್ಟು ಪ್ರದೇಶದ ಗರ್ಭಿಣಿಯನ್ನು 7 ಕಿ.ಮೀ ವರೆಗೂ ಸ್ಟ್ರೆಚರ್‌ನಲ್ಲಿ ಹೊತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮೂವರು ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾನವೀಯತೆ ಮರೆದಿದ್ದಾರೆ.
ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡು ಕಾಡಿನಲ್ಲಿ ಒದ್ದಾಡುತ್ತಿದ್ದ ಮಹಿಳೆಯನ್ನು ತೆಲಂಗಾಣದ ಪುಸುಗುಡೆಂ ಗ್ರಾಮದಿಂದ 7 ಕಿ.ಮೀ. ದೂರದಲ್ಲಿರುವ ಭದ್ರಾಡ್ರಿ ಕೊತಗುಡೆಮ್‌ನ ಮುಲಕಲಪಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾರ್ಯಕರ್ತೆಯರು ಹೊತ್ತೊಯ್ದಿದ್ದಾರೆ.
ಇದೀಗ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಕಾರ್ಯಕರ್ತೆಯರಿಗೆ ಕೃತಜ್ಞತೆ ತಿಳಿಸಿದ್ದಾರೆ.