ಅಮರಾವತಿ (ಆಂಧ್ರ ಪ್ರದೇಶ): ದಸರಾ ಹಬ್ಬಕ್ಕಾಗಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ರಾಜ್ಯ ಮತ್ತು ತೆಲಂಗಾಣದ ನಡುವಿನ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ಬಸ್‌ಗಳ ಸಂಚಾರಕ್ಕಾಗಿ ಅನುಕೂಲ ಮಾಡಿಕೊಟ್ಟಿದೆ.
ಆಂಧ್ರಪ್ರದೇಶ ಮೂಲದ ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ಈ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಪೆರ್ನಿ ವೆಂಕಟ್ರಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಸಂಚಾರ ಉಲ್ಲಂಘನೆಯ ದಂಡವನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವೆಂಕಟ್ರಮಯ್ಯ ಸಮರ್ಥಿಸಿಕೊಂಡರು.
ಎರಡೂ ತೆಲುಗು ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳ ನಡುವಿನ ಅಸ್ತವ್ಯಸ್ತತೆಯು ದಸರಾ ಹಬ್ಬಕ್ಕಾಗಿ ಮನೆಗೆ ತೆರಳುತ್ತಿದ್ದ ನೂರಾರು ಜನರ ಪ್ರಯಾಣಕ್ಕೆ ಅಡ್ಡಿಯಾಗಿತ್ತು. ತಮ್ಮ ಊರಿಗೆ ತೆರಳಲು ಜನ ಗಡಿಯಲ್ಲಿ ಇಳಿದು ಬೇರೆ ಬಸ್‌ಗಳ ಮೂಲಕ ಪ್ರಯಾಣಿಸಬೇಕಿತ್ತು.