ಗಂಜಾಂ: ಮಗುವೊಂದು ಆಡವಾಡುತ್ತಿದ್ದ ಪಿಲ್ಲರ್ ಮೇಲೆ ಬಿದ್ದಿದ್ದು, ಈ ವೇಳೆ ರಾಡ್ ಮಗುವಿನ ದವಡೆಯ ಮೂಲಕ ಬಾಯಿಯಿಂದ ಹೊರ ಬಂದಿದೆ. ಈ ಘಟನೆ ಜಿಲ್ಲೆಯ ಕೇಶಾಪೂರ್ ಸಮೀಪದ ಪಾಲಕಷಂಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸನ್ಯಾಸಿ ಗೌಡ ಎಂಬ ವ್ಯಕ್ತಿ ತನ್ನ ಮನೆಯ ಮೇಲೆ ಮತ್ತೊಂದು ಅಂತಸ್ತಿನ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ಆತನ ನಾಲ್ಕು ವರ್ಷದ ಮಗಳು ಮನಸ್ಮಿತ ಗೌಡ್ ಆಟವಾಡಲು ತೆರಳಿದ್ದು, ಪಿಲ್ಲರ್ ಮೇಲೆ ಬಿದ್ದಿದ್ದಾಳೆ. ಈ ವೇಳೆ, ಬಾಲಕಿಯ ದವಡೆಯಿಂದ ಬಾಯಿಯ ಹೊರಗೆ ಕಬ್ಬಿಣದ ರಾಡ್ ನುಗ್ಗಿ ಅವಾಂತರ ಸೃಷ್ಟಿಸಿತ್ತು.
ಇನ್ನು ಕುಟುಂಬಸ್ಥರು ಪಿಲ್ಲರ್ ರಾಡ್ನ್ನು ಕಟ್ ಮಾಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಶಿಶು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಕಬ್ಬಿಣದ ರಾಡ್ನ್ನು ತೆಗೆದಿದ್ದಾರೆ. ಪ್ರಸ್ತುತ ಮನುಸ್ಮಿತ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.