ETV Bharat / bharat

ಆನ್​ಲೈನ್​ ಆರ್ಡರ್ ಮಾಡಿದ್ದೇ ಬೇರೆ ಮನೆಗೆ ಬಂದಿದ್ದೇ ಬೇರೆ: ಲಕ್ಕಿ ಬಾಯ್​ಗೆ ಸಿಕ್ತು ಬಂಪರ್​ ಬಹುಮಾನ!

ಇತ್ತೀಚೆಗೆ ಆನ್​ಲೈನ್​ನಲ್ಲಿ ಶಾಪಿಂಗ್​ ಮಾಡಿದಾಗ ಕೆಲವೊಮ್ಮೆ ಕೆಲವೊಂದಿಷ್ಟು ವಸ್ತುಗಳು ಅದಲು-ಬದಲಾಗುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಆನ್​ಲೈನ್​ನಲ್ಲಿ ಶಾಪಿಂಗ್​ ಮಾಡಿದ ಇಲ್ಲೊಬ್ಬ ಯುವಕನಿಗೆ ಆನ್​ಲೈನ್ ದೈತ್ಯ ಅಮೆಜಾನ್​ ಕಳುಹಿಸಿದ್ದೇನು ಗೊತ್ತೇ?.

Amazon honours Kerala man for his honesty
ಲಕ್ಕಿ ಬಾಯ್​
author img

By

Published : Aug 20, 2020, 9:33 PM IST

ಮಲಪ್ಪುರಂ: ಆನ್​ಲೈನ್​ ಮೂಲಕ ಖರೀದಿಸುವ ಎಷ್ಟೋ ವಸ್ತುಗಳು ಅದಲು-ಬದಲಾಗಿದ್ದನ್ನು ನಾವು ಕಂಡಿದ್ದೇವೆ. ಫೋನ್ ಆರ್ಡರ್​ ಮಾಡಿದರೆ ಕಲ್ಲು ಬಂದಿದ್ದು, ಇಯರ್​ ಫೋನ್​ ಖರೀದಿಸಿದ್ದರೆ ಬೇರೊಂದು ವಸ್ತು ಗ್ರಾಹಕರಿಗೆ ತಲುಪಿದ್ದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಯುವಕನಿಗೆ ಆಗಿದ್ದೇ ಬೇರೆ!

ಆನ್​ಲೈನ್ ದೈತ್ಯ ಅಮೆಜಾನ್​ನಲ್ಲಿ 1,400 ರೂ.ಗಳ ಪವರ್​ ಬ್ಯಾಂಕ್‌ ಆರ್ಡರ್​ ಮಾಡಿದ್ದ ನಬಿಲ್​ ಎಂಬ ಲಕ್ಕಿ ಬಾಯ್​ಗೆ ಪವರ್​ ಬ್ಯಾಂಕ್‌ ಬದಲಾಗಿ ಬರೋಬ್ಬರಿ 8,000 ರೂ. ಮೌಲ್ಯದ ಆಂಡ್ರಾಯ್ಡ್ ಫೋನ್​ ಬಂದಿದೆ. ಇದರಿಂದ ಆಶ್ಚರ್ಯಗೊಂಡ ನಬಿಲ್​, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ನಾನು ಆರ್ಡರ್ ಮಾಡಿದ್ದು 1,400 ರೂ. ಮೌಲ್ಯದ ಪವರ್ ಬ್ಯಾಂಕ್​, ಆದರೆ, ನೀವು 8,000 ರೂ. ಮೌಲ್ಯದ ಆಂಡ್ರಾಯ್ಡ್ ಮೊಬೈಲ್ ನೀಡಿದ್ದೀರಿ, ನಾವು ಇದನ್ನು ಇಟ್ಟುಕೊಳ್ಳಬೇಕೆ? ಅಥವಾ ಹಿಂದಿರುಗಿಸಬೇಕೇ ಎಂದು ಟ್ವೀಟ್​ ಮಾಡುವ ಮೂಲಕ ಅಮೆಜಾನ್​ಗೆ ಪ್ರಶ್ನೆ ಹಾಕಿದ್ದಾರೆ.

Amazon honours Kerala man for his honesty
ಲಕ್ಕಿ ಬಾಯ್​

ಅಮೆಜಾನ್​ ಕಂಪನಿ ಸಹ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್​ ಮಾಡಿದೆ. ಟ್ವೀಟ್​ನಲ್ಲಿ ಯುವಕನ ಪ್ರಾಮಾಣಿಕತೆಯನ್ನು ಶ್ಲಾಘಿಸಿದೆ. ಅಷ್ಟೇ ಅಲ್ಲದೇ ಮೊಬೈಲ್​ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ತಿಳಿಸಿದೆ.

ನಬಿಲ್ ತನ್ನ ಸಹೋದರಿಗಾಗಿ ಆ. 10 ರಂದು ಅಮೆಜಾನ್​ನಲ್ಲಿ​ 1,400 ರೂ. ಮೌಲ್ಯದ ಪವರ್ ಬ್ಯಾಂಕ್​ವೊಂದನ್ನು ಆರ್ಡರ್​ ಮಾಡಿದ್ದರು. ಅದರಂತೆ ಒಂದು ವಾರದೊಳಗೆ ಅಮೆಜಾನ್​ ಕಂಪನಿಯು ನಬಿಲ್ ಅವರ ಮನೆಗೆ ಆರ್ಡರ್ ​ಅನ್ನು ತಲುಪಿಸಿತ್ತು. ಆದರೆ, ಅದನ್ನು ತೆರೆದು ನೋಡಿದಾಗ ನಬಿಲ್​ಗೆ ಆಶ್ಚರ್ಯ ಕಾದಿತ್ತು. ಪವರ್​ ಬ್ಯಾಂಕ್‌ ಬದಲಾಗಿ 8,000 ರೂ. ಮೌಲ್ಯದ ಆಂಡ್ರಾಯ್ಡ್ ಫೋನ್ ಇರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದನು. ತಮ್ಮ ತಪ್ಪಿನ ಅರಿವಾಗಿ ಅಮೆಜಾನ್​ ಕಂಪನಿಯೂ ಯುವಕನ ಪ್ರಾಮಾಣಿಕತೆಯನ್ನು ಹೊಗಳುವ ಮೂಲಕ ಮೊಬೈಲ್​ ಅನ್ನು ಸಹ ಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.