ETV Bharat / bharat

ಹೋರ್ಡಿಂಗ್‌ಗಳ ತೆರವಿಗೆ ಅಲಹಾಬಾದ್ ಹೈಕೋರ್ಟ್ ಆದೇಶ.. ಯೋಗಿ ಸರ್ಕಾರಕ್ಕೆ ಮುಖಭಂಗ! - ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅನೇಕ ಮಂದಿ ಮೃತಪಟ್ಟಿದ್ದರು. ಅಲ್ಲದೇ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ಈ ವೇಳೆ ಹಿಂಸಾಚಾರ ನಡೆಸಿದ ಆರೋಪ ಹೊತ್ತಿರುವವರ ಹೆಸರು, ಭಾವಚಿತ್ರ, ವಿಳಾಸವನ್ನೊಳಗೊಂಡಂತೆ ಯುಪಿ ಸರ್ಕಾರವೇ ಹಾಕಿದ್ದ ಪೋಸ್ಟರ್ಸ್​​, ಹೋರ್ಡಿಂಗ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

Allahabad High Court
ಉತ್ತರ ಪ್ರದೇಶ
author img

By

Published : Mar 9, 2020, 5:12 PM IST

ಉತ್ತರ ಪ್ರದೇಶ: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆಸಿದ ಆರೋಪ ಹೊತ್ತಿರುವವರ ಹೆಸರು, ಭಾವಚಿತ್ರ, ವಿಳಾಸವನ್ನೊಳಗೊಂಡಂತೆ ಯುಪಿ ಸರ್ಕಾರವೇ ಹಾಕಿದ್ದ ಪೋಸ್ಟರ್ಸ್​​, ಹೋರ್ಡಿಂಗ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

ಯುಪಿಯಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅನೇಕ ಮಂದಿ ಮೃತಪಟ್ಟು, ಆಸ್ತಿ-ಪಾಸ್ತಿ ಹಾನಿಯಾಗಿತ್ತು. 100ಕ್ಕೂ ಹೆಚ್ಚು ಗಲಭೆಕೋರರನ್ನು ವಿಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿ ಮೂಲಕ ಗುರುತಿಸಿದ್ದ ಪೊಲೀಸರು 'ವಾಂಟೆಡ್ ದಂಗೆಕೋರರು' ಎಂಬ ಪೋಸ್ಟರ್​ಗಳನ್ನ ಬಿಡುಗಡೆ ಮಾಡಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿದ್ದರು. ಅಲ್ಲದೇ ಆಸ್ತಿ-ಪಾಸ್ತಿ ಹಾನಿಯಾಗಿದ್ದಕ್ಕೆ ನಿಗದಿತ ಸಮಯದೊಳಗೆ ಪರಿಹಾರ ಒದಗಿಸಬೇಕು, ಇಲ್ಲವಾದಲ್ಲಿ ಅವರ ಆಸ್ತಿ ವಶಪಡಿಸಿಕೊಳ್ಳುವುದಾಗಿ ಜಿಲ್ಲಾಡಳಿತ ಸೂಚಿಸಿತ್ತು.

ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸದಾಫ್ ಜಾಫರ್ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗದ ಆರೋಪಕ್ಕೆ ಸಾರ್ವಜನಿಕವಾಗಿ ಅವಮಾನಿಸಲ್ಪಡುವುದು ಯಾಕೆ? ಇದು ಆಫ್ಘಾನಿಸ್ತಾನ ಅಲ್ಲ. ಕಾನೂನು ವಿಷಯಗಳನ್ನ ಹೀಗೆ ಸಾರ್ವಜನಿಕವಾಗಿ ತರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಈ ಕುರಿತು ಇಂದು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಹಾಗೂ ನ್ಯಾ. ರಮೇಶ್ ಸಿನ್ಹಾರನ್ನೊಳಗೊಂಡ ನ್ಯಾಯಪೀಠವು, 'ಇದು ವ್ಯಕ್ತಿಗಳ ವೈಯಕ್ತಿಕ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ' ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಮಾರ್ಚ್ 16ರೊಳಗೆ ಪೋಸ್ಟರ್ಸ್​​, ಹೋರ್ಡಿಂಗ್‌ಗಳನ್ನು ತೆರವುಗೊಳಿಸುವಂತೆ ಲಖನೌ ವಿಭಾಗೀಯ ಆಯುಕ್ತ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.