ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಇಡೀ ದೇಶವೇ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂದಲ್ಲಿ ಭಾಗಿಯಾಗಲು ಎಲ್ಲರೂ ಕೈಜೋಡಿಸಿದ್ದು, ಅದಕ್ಕೆ ರೈಲ್ವೆ ಇಲಾಖೆ ಕೂಡ ಮುಂದಿದೆ.
ಭಾರತೀಯ ರೈಲ್ವೆ ಇಲಾಖೆ ಸಾವಿರಾರು ರೈಲುಗಳನ್ನ ಇಂದು ಸ್ಥಗಿತಗೊಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯ ಮಾಹಿತಿ ಕೂಡ ನೀಡಿದೆ. ಮಾರ್ಚ್ 22ರ ಮಧ್ಯರಾತ್ರಿಯಿಂದ ಸುಮಾರು 3,700 ರೈಲು ಸ್ಥಗಿತಗೊಂಡಿವೆ.
ಎಕ್ಸ್ಪ್ರೆಸ್-ಲೋಕಲ್ ಪ್ಯಾಸೆಂಜರ್,ಮೇಲ್, ಇಂಟರ್ಸಿಟಿ ರೈಲು ಸ್ಥಗಿತಗೊಂಡಿದ್ದು, ಯಾವುದೇ ಕಾರಣಕ್ಕೂ ಪ್ರಯಾಣ ಬೆಳೆಸಲ್ಲ. ಇನ್ನು ಸಂಚಾರದಲ್ಲಿರುವ ಪ್ರಯಾಣಿಕರಿಗೆ ಅಗತ್ಯ ಆಹಾರ, ನೀರು ಹಾಗೂ ವಿಶ್ರಾಂತಿ ಪಡೆದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ವಿಭಾಗೀಯ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.