ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೋಮವಾರ ಅಶೋಕ ಹೋಟೆಲ್‌ಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ಎಲ್ಲಾ ಹೋಟೆಲ್‌ಗಳು ಗೃಹ ವ್ಯವಹಾರ ಮತ್ತು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸೂಚಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೆಹಲಿ ಮತ್ತು ತಮಿಳುನಾಡಿನಲ್ಲಿ ಹೋಟೆಲ್‌ಗಳು ತೆರದಿಲ್ಲ. ಆದರೆ ಕೇರಳ, ಮಹಾರಾಷ್ಟ್ರಗಳಲ್ಲಿ ಭಾಗಶಃ ತೆರೆಯಲು ಅವಕಾಶವಿದೆ. ಜೀವನ ನಡೆಸಬೇಕೆಂದರೆ ಉದ್ಯಮ ನಡೆಸಬೇಕು. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿ ಉದ್ಯಮ ನಡೆಸಿ" ಎಂದು ಹೇಳಿದ್ದಾರೆ.
"ಔತಣಕೂಟ ನಡೆಸಲು ಅನುಮತಿ ಕೇಳಿ ನಾವು ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ಹೋಟೆಲ್ ಮಾಲೀಕರು ಸಹ ಈ ಪರಿಸ್ಥಿತಿಯೊಂದಿಗೆ ತಮ್ಮ ಪುನರುಜ್ಜೀವನದತ್ತ ಮುಂದುವರಿಯಬೇಕು. ಸರ್ಕಾರ ಶೀಘ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ. ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು" ಎಂದರು.
ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಅಶೋಕ ಹೋಟೆಲ್ ಉತ್ತಮ ಸೌಲಭ್ಯಗಳನ್ನು ಒದಗಿಸುವುದನ್ನು ಮುಂದುವರೆಸಲಿದೆ ಎಂದು ಪಟೇಲ್ ಹೇಳಿದರು.
ದೆಹಲಿ ಮತ್ತು ತಮಿಳುನಾಡಿನಲ್ಲಿ ಈವರೆಗೆ ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಆದರೆ ಈಗ ದೆಹಲಿಯಲ್ಲಿಯೂ ಹೋಟೆಲ್‌ಗಳನ್ನು ತೆರೆಯಲು ಅನುಮತಿ ನೀಡಿದ ನಂತರ ಹೋಟೆಲ್‌ಗೆ ಬರುವ ಅತಿಥಿಗಳಿಗೆ ಸುರಕ್ಷತೆಯನ್ನು ಖಾತರಿಪಡಿಸುವುದು ದೊಡ್ಡ ಸವಾಲಾಗಿದೆ.