ನವದೆಹಲಿ: ಎಎಪಿ ಶಾಸಕಿ ಅಲ್ಕಾ ಲಂಬಾ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ.
-
@ArvindKejriwal 🙏🇮🇳@AamAadmiParty #ChandniChowk #MLA #AlkaLamba pic.twitter.com/lwz14w1xCB
— Alka Lamba - अलका लाम्बा (@LambaAlka) September 6, 2019 " class="align-text-top noRightClick twitterSection" data="
">@ArvindKejriwal 🙏🇮🇳@AamAadmiParty #ChandniChowk #MLA #AlkaLamba pic.twitter.com/lwz14w1xCB
— Alka Lamba - अलका लाम्बा (@LambaAlka) September 6, 2019@ArvindKejriwal 🙏🇮🇳@AamAadmiParty #ChandniChowk #MLA #AlkaLamba pic.twitter.com/lwz14w1xCB
— Alka Lamba - अलका लाम्बा (@LambaAlka) September 6, 2019
ನವದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದ ಶಾಸಕಿ ಅಲ್ಕಾ ಲಂಬಾ ಟ್ವಿಟ್ಟರ್ನಲ್ಲೆ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಟ್ವಿಟ್ಟರ್ನಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನ ಟ್ಯಾಗ್ ಮಾಡಿ ನಿಮ್ಮ ಪಕ್ಷದ ದುರಂಹಕಾರಿ ನಾಯಕರೊಬ್ಬರು ಟ್ವಿಟ್ಟರ್ನಲ್ಲೂ ಕೂಡ ನಿಮ್ಮ ರಾಜೀನಾಮೆಯನ್ನ ಅಂಗೀಕರಿಸುತ್ತೇವೆ ಎಂದು ತಿಳಿಸಿದ್ದರು. ಹಾಗಾಗಿ ರಾಜೀನಾಮೆಯನ್ನ ಅಂಗೀಕರಿಸಬೇಕು ಎಂದು ಮನವಿ ಮಾಡಿದ್ದರು.
ಅಲ್ಲದೆ ಕಳೆದ 6 ವರ್ಷಗಳಿಂದ ಸಾಕಷ್ಟು ಕಲಿತಿದ್ದೇನೆ. ಆದರೆ ಈಗ ಗುಡ್ ಬೈ ಹೇಳುವ ಕಾಲ ಬಂದಿದೆ ಎಂದು ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಪಕ್ಷದಿಂದಲೇ ತನ್ನ ರಾಜಕೀಯ ಜೀವನ ಆರಂಭಿಸಿದ್ದ ಅಲ್ಕಾ ಲಂಬಾ, ಎಎಪಿಗೆ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿ ಮತ್ತೆ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ.