ಮುಂಬೈ: ದೇಶದಲ್ಲಿ ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡುವಲ್ಲಿ ನಟ ಅಕ್ಷಯ್ ಕುಮಾರ್ ಎಂದೂ ಹಿಂದೆ ಬಿದ್ದಿಲ್ಲ. ಹಲವು ಬಾರಿ ನೆರವು ನೀಡಿರುವ ಬಾಲಿವುಡ್ ನಟ, ಇದೀಗ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬಿಹಾರ ಮತ್ತು ಅಸ್ಸೋಂ ರಾಜ್ಯಗಳಿಗೆ ತಲಾ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಬಿಹಾರ ಮತ್ತು ಅಸ್ಸೋಂ ಮುಖ್ಯಮಂತ್ರಿಗಳೊಂದಿಗೆ ಪ್ರವಾಹ ಪರಿಸ್ಥಿತಿಗಳ ಬಗ್ಗೆ ನಟ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ನೈಸರ್ಗಿಕ ವಿಪತ್ತಿನಿಂದ ಸಂಕಷ್ಟಕ್ಕೆ ಸಿಲುಕಿರುವ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೊನಾಸ್ ಕೂಡ ಅಸ್ಸೋಂ ಪ್ರವಾಹ ಪರಿಹಾರಕ್ಕೆ ಕೊಡುಗೆ ನೀಡಿದ್ದಾರೆ.
-
#Biharfloods@nickjonas and I have made a donation, now it's your turn.@goonj: https://t.co/BHMYJa8ao1@FeedingIndia:https://t.co/lKFurhscCm
— PRIYANKA (@priyankachopra) July 28, 2020 " class="align-text-top noRightClick twitterSection" data="
🙏 pic.twitter.com/CmE0bDI8gy
">#Biharfloods@nickjonas and I have made a donation, now it's your turn.@goonj: https://t.co/BHMYJa8ao1@FeedingIndia:https://t.co/lKFurhscCm
— PRIYANKA (@priyankachopra) July 28, 2020
🙏 pic.twitter.com/CmE0bDI8gy#Biharfloods@nickjonas and I have made a donation, now it's your turn.@goonj: https://t.co/BHMYJa8ao1@FeedingIndia:https://t.co/lKFurhscCm
— PRIYANKA (@priyankachopra) July 28, 2020
🙏 pic.twitter.com/CmE0bDI8gy
ಸಾಂಕ್ರಾಮಿಕ ರೋಗದ ವಿರುದ್ಧ ನಾವೆಲ್ಲರೂ ಹೋರಾಡುತ್ತಿರುವಾಗ ಅಸ್ಸೋಂ ರಾಜ್ಯ ಮತ್ತೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಾನ್ಸೂನ್ ಮಳೆಯು ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ವೇಗವಾಗಿ ಏರುತ್ತಿರುವ ನದಿಗಳ ನೀರಿನ ಮಟ್ಟವು ವಿಶ್ವದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೂ ಆತಂಕ ತಂದಿದೆ ಎಂದು ಪ್ರಿಯಾಂಕಾ ಟ್ವಿಟ್ ಮಾಡಿದ್ದರು.