ETV Bharat / bharat

ಹೊಸದಾಗಿ 6 ಮಾರ್ಗಗಳಲ್ಲಿ ಏರ್​-ಏಷ್ಯಾ ಇಂಡಿಯಾ ವಿಮಾನಸೇವೆ ಆರಂಭ - ಏರ್​​​​​ ಏಷ್ಯಾ ಇಂಡಿಯಾದಿಂದ ದೇಶೀಯ ವಿಮಾನಸೇವೆ

ವಿಮಾನಯಾನ ಸಂಸ್ಥೆ ಏರ್ ಏಷ್ಯಾ ಇಂಡಿಯಾ ಭಾರತದಲ್ಲಿ ದೇಶೀಯವಾಗಿ ಹೊಸ ಆರು ಮಾರ್ಗಗಳಲ್ಲಿ ಸಂಚಾರ ಆರಂಭಿಸಲು ಮುಂದಾಗಿದೆ.

AirAsia India
ಏರ್​ಏಷ್ಯಾ ಇಂಡಿಯಾ
author img

By

Published : Oct 21, 2020, 6:57 PM IST

ಮುಂಬೈ: ಏರ್​ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆ ಹೊಸದಾಗಿ 6 ಮಾರ್ಗಗಳಲ್ಲಿ ತನ್ನ ವಿಮಾನಯಾನ ಸೇವೆ ಆರಂಭಿಸುತ್ತಿದ್ದು, ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ಚೆನ್ನೈನಿಂದ ಅಹಮದಾಬಾದ್, ಗೋವಾ, ಮುಂಬೈ, ವಿಶಾಖಪಟ್ಟಣ, ಮುಂಬೈನಿಂದ ಗೋವಾಗೆ ಹಾಗೂ ಜೈಪುರದಿಂದ ಕೋಲ್ಕತಾಗೆ ವಿಮಾನಯಾನ ಸೇವೆ ಆರಂಭಿಸಲಾಗಿದೆ. ಹಬ್ಬದ ಕಾರಣದಿಂದ ಬೇಡಿಕೆ ಹೆಚ್ಚಾಗಿದ್ದು, ಈ ಕಾರಣದಿಂದ ವಿಮಾನಯಾನ ಸೇವೆ ಆರಂಭಿಸಲಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ದೇಶೀಯವಾಗಿ ತಮ್ಮ ಜಾಲವನ್ನು ಹೆಚ್ಚಿಸಿಕೊಳ್ಳಲು ಮತ್ತು ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸುರಕ್ಷತೆ ಹಾಗೂ ಭದ್ರತೆಯ ಪ್ರಯಾಣಕ್ಕಾಗಿ ವಿಮಾನಯಾನ ಸೇವೆ ಆರಂಭಿಸಲಾಗಿದೆ ಎಂದು ಏರ್​ಏಷ್ಯಾ ಇಂಡಿಯಾ ಚೀಫ್ ಕಮರ್ಷಿಯಲ್ ಅಧಿಕಾರಿ ಅಂಕುರ್ ಗಾರ್ಗ್​​ ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ಕೊರೊನಾ ವೇಳೆಯಲ್ಲಿ ಪ್ರಯಾಣಿಕರಿಗೆ ದರಗಳಲ್ಲಿ ರಿಯಾಯಿತಿ ನೀಡಲಾಗಿದ್ದು, ಮುಂಗಡ ಕಾಯ್ದಿರಿಸಿದ ನಂತರವೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಪ್ರಯಾಣ ದಿನಾಂಕವನ್ನು ಬದಲಾಯಿಸಬಹುದು ಎಂದು ಅಂಕುರ್​ ಗಾರ್ಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.