ETV Bharat / bharat

ಉಸಿರು ಕಟ್ಟುವ ಹವಾಮಾನ.. ವಿಷವಾಗುತ್ತಿದೆ ಪ್ರಾಣವಾಯು - ವಾಯು ಮಾಲಿನ್ಯ

ಭಾರತದಲ್ಲಿ ವಾಯು ಮಾಲಿನ್ಯವು ಸುಮಾರು ಎರಡು ದಶಕಗಳಿಂದಲೂ ಉಂಟಾಗುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ಅಸ್ತಮಾ, ವಯಸ್ಕರಲ್ಲಿ ಪ್ಯಾರಾಲಿಸಿಸ್‌ ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳು ಕಂಡು ಬರುತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು..

air-suffocating-problem
ವಾಯು ಮಾಲಿನ್ಯ
author img

By

Published : Aug 1, 2020, 5:01 PM IST

ದೇಶದ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಮತ್ತು ಒಂದು ಲಕ್ಷ ಜನರು ಉಸಿರಾಟ ಸಂಬಂಧಿ ರೋಗಗಳಿಂದ ದಿನನಿತ್ಯ ಬಳಲುತ್ತಿದ್ದಾರೆ ಎಂಬುದು ಅತ್ಯಂತ ಆಘಾತಕರ ಸಂಗತಿ. ನಮ್ಮ ಜೀವವನ್ನು ರಕ್ಷಿಸುವ ಗಾಳಿಯೇ ವಿಷವಾಗುತ್ತಿದೆ ಮತ್ತು ರೋಗಜನಕವಾಗುತ್ತಿದೆ. ಅಷ್ಟೇ ಅಲ್ಲ, ಹಲವರ ಜೀವಿತಾವಧಿಯನ್ನು ಕಡಿಮೆ ಮಾಡುತ್ತಿದೆ. ಇತ್ತೀಚೆಗೆ ಶಿಕಾಗೋ ವಿಶ್ವವಿದ್ಯಾಲಯ ನಡೆಸಿದ ಎಪಿಕ್ ಅಧ್ಯಯನದಲ್ಲಿ ಜಾಗತಿಕವಾಗಿ ವ್ಯಕ್ತಿಯ ಜೀವಿತಾವಧಿಯನ್ನು ಸುಮಾರು ಎರಡು ವರ್ಷದಷ್ಟು ಕಡಿಮೆ ಮಾಡುತ್ತಿದೆ ಎಂದು ವಿವರಿಸಿದೆ.

ನಮ್ಮ ದೇಶದಲ್ಲಿ ವ್ಯಕ್ತಿಯ ಜೀವಿತಾವಧಿಯು ಸರಾಸರಿ 5.2 ವರ್ಷಗಳಷ್ಟು ಕಡಿಮೆ ಮಾಡುತ್ತಿದೆ. ಇನ್ನು, ಉತ್ತರ ಭಾರತದಲ್ಲಿ ಗರಿಷ್ಠ 10 ವರ್ಷಗಳವರೆಗೂ ಇದು ಹೆಚ್ಚಿದೆ ಎಂದು ಹೇಳಲಾಗಿದೆ. ಲಖನೌನಂತಹ ನಗರದಲ್ಲಿ ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳು ವಿಶ್ವ ಆರೋಗ್ಯ ಸಂಘಟನೆ ಶಿಫಾರಸು ಮಾಡಿದ್ದಕ್ಕಿಂತ 11 ಪಟ್ಟು ಹೆಚ್ಚಿದೆ. ಇದು ಪ್ರಕರಣದ ಗಂಭೀರತೆಯನ್ನು ನೇರವಾಗಿ ಸೂಚಿಸುತ್ತದೆ.

ಉತ್ತರ ಕೋಲ್ಕತ್ತಾದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಸಾಮಾನ್ಯ ಉಸಿರಾಟದಿಂದ, ವ್ಯಕ್ತಿಯೊಬ್ಬ ದಿನಕ್ಕೆ 22 ಸಿಗರೇಟ್ ಸೇದುವುದಕ್ಕಿಂತಲೂ ಹೆಚ್ಚು ಪ್ರಮಾಣದ ಕಲ್ಮಶವು ದೇಹದ ಒಳಗೆ ಹೋಗುತ್ತದೆ ಎಂಬ ವರದಿಯ ಫಲಿತಾಂಶವನ್ನು ನಾವು ಹೇಗೆ ಸ್ವೀಕರಿಸಬೇಕು? ಜಿಂದ್‌, ಬಾಘ್‌ಪಟ್‌, ಗಾಜಿಯಾಬಾದ್, ಮೊರಾದಾಬಾದ್,ಸಿರ್ಸಾ ಮತ್ತು ನೋಯ್ಡಾದಲ್ಲಿನ ವಾಯು ಗುಣಮಟ್ಟವು ದೆಹಲಿಗಿಂತ ಹೆಚ್ಚು ಕಳಪೆಯಾಗಿದೆ.

ದೆಹಲಿಯನ್ನು ನಾವು ಮಾಲಿನ್ಯದ ರಾಜಧಾನಿ ಎಂದೇ ಗುರುತಿಸುತ್ತೇವೆ. 66 ಕೋಟಿ ಭಾರತೀಯರ ಜೀವನ ಮಟ್ಟಕ್ಕೆ ವಾಯು ಗುಣಮಟ್ಟವು ಅತ್ಯಂತ ಪ್ರಮುಖವಾಗಿದೆ ಎಂಬುದು ಮತ್ತು ದೇಶದಲ್ಲಿ ಎಂಟು ಸಾವುಗಳ ಪೈಕಿ ಒಂದಕ್ಕೆ ವಾಯು ಗುಣಮಟ್ಟ ಕಾರಣವಾಗಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಸಂಸ್ಥೆ (ಐಸಿಎಂಆರ್‌) ವಿಶ್ಲೇಷಿಸಿದೆ. ಈ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬುದನ್ನು ಶಿಕಾಗೋ ವಿವಿಯ ವರದಿ ಸಾಬೀತುಪಡಿಸಿದೆ.

ಭಾರತದಲ್ಲಿ ವಾಯು ಮಾಲಿನ್ಯವು ಸುಮಾರು ಎರಡು ದಶಕಗಳಿಂದಲೂ ಉಂಟಾಗುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ಅಸ್ತಮಾ, ವಯಸ್ಕರಲ್ಲಿ ಪ್ಯಾರಾಲಿಸಿಸ್‌ ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳು ಕಂಡು ಬರುತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣವು ಹತ್ತು ಮೈಕ್ರೋಗ್ರಾಮ್‌ಗಿಂತ ಹೆಚ್ಚಿರಬಾರದು. ಮಾಲಿನ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳು ವಿಫಲವಾಗಿರುವುದನ್ನು ಈ ವಿಚಾರದಲ್ಲಿ ಕ್ಷಮಿಸಲು ಸಾಧ್ಯವಿಲ್ಲ. ಇದರಿಂದಾಗಿ ದೇಶದ 3ನೇ ಒಂದರಷ್ಟು ನಗರಗಳು ಮತ್ತು ಪಟ್ಟಣಗಳು ಗ್ಯಾಸ್ ಚೇಂಬರ್‌ಗಳಾಗಿ ಪರಿವರ್ತನೆಯಾಗಿವೆ.

ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ದಕ್ಷಿಣ ಏಷ್ಯಾದ ನಾಲ್ಕು ದೇಶಗಳಲ್ಲಿ ಅತಿ ಹೆಚ್ಚು ಭೀತಿ ಇದೆ. ಬಾಂಗ್ಲಾದೇಶದ ನಂತರ ವಿಶ್ವದಲ್ಲೇ ಅತಿ ಹೆಚ್ಚು ಮಲಿನವಾದ ದೇಶ ಎರಡನೆಯದಾಗಿದೆ. ಹೀಗಾಗಿ ಇಡೀ ದೇಶ ನಾಚಿಕೆಪಟ್ಟುಕೊಳ್ಳುವಂತಾಗಿದೆ. ವಾಯು ಮಾಲಿನ್ಯವನ್ನು ತಡೆಗಟ್ಟಲು ನೆರೆ ದೇಶ ಚೀನಾ ಕೈಗೊಂಡಿರುವ ಹಲವು ರೂಪದ ಸೂತ್ರವನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಇದು ಕಲ್ಲಿದ್ದಲು ಆಧಾರಿತ ಹೊಸ ಉದ್ಯಮ ಘಟಕಗಳನ್ನು ನಿಷೇಧಿಸಿದೆ. ಈಗಿರುವ ಘಟಕಗಳಿಗೂ ಮಾಲಿನ್ಯ ಹೊರಸೂಸುವಿಕೆ ಪ್ರಮಾಣವನ್ನು ನಿಗದಿ ಮಾಡಿದೆ.

ಕೆಲವು ಸ್ಟೀಲ್ ಮಿಲ್‌ಗಳನ್ನು ಮುಚ್ಚಲಾಗಿದೆ ಮತ್ತು ವಾಹನ ಓಡಾಟವನ್ನೂ ನಿಯಂತ್ರಿಸಲಾಗಿದೆ. ಉತ್ತರ ಚೀನಾದಲ್ಲಿ ಮರುಅರಣ್ಯೀಕರಣ ಮಾಡಲಾಗಿದೆ. ವಾರ್ಷಿಕವಾಗಿ 25 ಟನ್ ಕಾರ್ಬನ್ ಡೈಆಕ್ಸೈಡ್‌ನ ಇದು ಹೀರಿಕೊಳ್ಳಲಿದೆ ಮತ್ತು 60 ಕಿಲೋ ಆಮ್ಲಜಕವನ್ನು ಪ್ರತಿ ದಿನ ನೀಡಲಿದೆ. ಇದು ವಾಯು ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಲಿದೆ ಮತ್ತು ಮಾಲಿನ್ಯದ ಮೇಲೆ ನಿಯಂತ್ರಣವನ್ನೂ ಇಡಲಿದೆ.

ಆದರೆ, ನಮ್ಮಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಹಿಂದಿನ ಸರ್ಕಾರದ ಸಾಂಸ್ಥಿಕ ನಿರ್ಲಕ್ಷ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ, ಮೋದಿ ಸರ್ಕಾರ ಕೈಗೊಂಡ “ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆ” ಇನ್ನೂ ಜಾರಿಗೆ ಬಂದಿಲ್ಲ. ಪೆಟ್ರೋಲಿಯಂ ಆಧಾರಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವ ಯೋಜನೆ ಇನ್ನೂ ಆಕರ್ಷಕವಾಗಿಲ್ಲ. ಪರಿಸರ ರಕ್ಷಣೆ ಪ್ರಯತ್ನಗಳು ಮತ್ತು ವಾಯು ಮಾಲಿನ್ಯದಿಂದ ಉಂಟಾಗುತ್ತಿರುವ ಮರಣ ಪ್ರಮಾಣಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬ ಅರಿವಿನ ಆಧಾರದಲ್ಲಿ ಸರ್ಕಾರದ ಆದ್ಯತೆಗಳು ಬದಲಾಗಬೇಕಿದೆ.

ಜನರ ಸಹಕಾರವನ್ನೂ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಿದೆ. ಸಾಮಾಜಿಕ ಅರಣ್ಯೀಕರಣವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾದ್ರೆ, ಕಚೇರಿಗಳು ಮತ್ತು ವಾಸಸ್ಥಳವನ್ನು ಒಂದೇ ಕಡೆ ತರಬೇಕು. ಔದ್ಯಮಿಕ ಮತ್ತು ವಾಹನ ಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರುವುದು ಮತ್ತು ಸೌರ ಶಕ್ತಿಯನ್ನು ವ್ಯಾಪಕವಾಗಿ ಉತ್ಪಾದಿಸುವುದು ಇತ್ಯಾದಿಯನ್ನು ಜಾರಿಗೆ ತರಬೇಕು. ದೇಶದ ಜನರಿಗೆ ಆರೋಗ್ಯಕರ ಜೀವನವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ವಾಯು ಗುಣಮಟ್ಟವನ್ನು ವೃದ್ಧಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.