ETV Bharat / bharat

ರನ್​ವೇ ಬಿಟ್ಟು ಜಾರಿದ ವಿಮಾನ : ಓರ್ವ ಪೈಲೆಟ್​ ಸಾವು, ಅನೇಕರ ಸ್ಥಿತಿ ಗಂಭೀರ, ಸಮರೋಪಾದಿಯಲ್ಲಿ ರಕ್ಷಣೆ

ದುಬೈನಿಂದ ಕೇರಳಕ್ಕೆ ಬಂದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ ರನ್​ವೇ ಮೇಲೆ ಅಪ್ಪಳಿಸಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ದುರ್ಘಟನೆ ರಾತ್ರಿ 7:45ರ ಸುಮಾರಿಗೆ ನಡೆದಿದೆ.

Air india flight
Air india flight
author img

By

Published : Aug 7, 2020, 9:07 PM IST

Updated : Aug 7, 2020, 11:50 PM IST

ಕೋಯಿಕ್ಕೋಡ್​ (ಕೇರಳ): 184 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಆಗಮಿಸಿದ್ದ ಏರ್​ ಇಂಡಿಯಾ ವಿಮಾನವೊಂದು ಲ್ಯಾಂಡ್​ ಆಗ್ತಿದ್ದ ವೇಳೆ ರನ್​ವೇಗೆ ಅಪ್ಪಳಿಸಿದೆ. ಕೇರಳದ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು, ಅಪ್ಪಳಿಸಿದ ರಭಸಕ್ಕೆ ವಿಮಾನ 2 ಹೋಳಾಗಿದೆ. ಅವಘಡದಲ್ಲಿ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ರನ್​ವೇಗೆ ಅಪ್ಪಳಿಸಿದ ಏರ್​​ ಇಂಡಿಯಾ ವಿಮಾನ

ದುಬೈನಿಂದ ಕೇರಳಕ್ಕೆ ಆಗಮಿಸಿದ್ದ ಏರ್​ ಇಂಡಿಯಾ ವಿಮಾನ ಭಾರಿ ಮಳೆಯಾಗುತ್ತಿದ್ದ ವೇಳೆ ಲ್ಯಾಂಡ್​ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ವಿಮಾನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಚರಣೆ ಆರಂಭಗೊಂಡಿದೆ. ವಿಮಾನದಲ್ಲಿ ಇಬ್ಬರು ಪೈಲಟ್​ಗಳು, 4 ಮಂದಿ ಸಿಬ್ಬಂದಿ, 10 ಹಸುಗೂಸು ಸೇರಿ ಒಟ್ಟು 184 ಪ್ರಯಾಣಿಕರಿದ್ದರು.

ಏರ್​ ಇಂಡಿಯಾ ವಿಮಾನದಲ್ಲಿ ಆರು ಮಂದಿ ಸಿಬ್ಬಂದಿಗಳಿದ್ದು, ವಸಂತ್​ ದೀಪಕ್​, ಕ್ಯಾಪ್ಟನ್​ ಅಖಿಲೇಶ್​​ ಕುಮಾರ್​, ಶಿಲ್ಪಾ, ಅಕ್ಷಯ್​ ಸಿಂಗ್​, ಕುಮಾರ್​ ಲಲಿತಾ ಹಾಗೂ ಬಿಸ್ವಾಸ್​ ಇದ್ದರು.

ಇನ್ನು ಘಟನೆಯಲ್ಲಿ ಪೈಲೆಟ್​ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಇದರ ಮಧ್ಯೆ 37ಕ್ಕೂ ಅಧಿಕ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ 15 ಆ್ಯಂಬುಲೆನ್ಸ್​ಗಳ ಆಗಮನವಾಗಿದೆ ಎಂದು ತಿಳಿದು ಬಂದಿದೆ.

Last Updated : Aug 7, 2020, 11:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.