ETV Bharat / bharat

ಜೆಟ್​ ಬಿಕ್ಕಟ್ಟು: ಏರ್​ ಇಂಡಿಯಾ- ಎಸ್​ಬಿಐ ಅಧ್ಯಕ್ಷರ ಭೇಟಿಯ ಹಿಂದಿದೆ ಕುತೂಹಲದ ನಡೆ..!

author img

By

Published : Apr 19, 2019, 5:39 PM IST

ತೂಕದ ಋಣಭಾರ ಮತ್ತು ಆದಾಯ ಮೂಲಗಳ ಕಡಿತದಿಂದ ತತ್ತರಿಸಿದ ಜೆಟ್​ ಏರ್​ವೇಸ್​, ಬುಧವಾರ ತಡರಾತ್ರಿ 16 ದೊಡ್ಡ ವಿಮಾನಗಳು, 10 'ಬಿ777-300ಇಆರ್​ಎಸ್​' ಮತ್ತು 6 ಏರ್​ಬಸ್​ 'ಎ330ಎಸ್​'ಗಳ ಹಾರಾಟ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು. ಇವುಗಳಲ್ಲಿ ದೈತ್ಯ ಬೋಯಿಂಗ್ ವಿಮಾನಗಳ ಮೇಲೆ ಏರ್​ ಇಂಡಿಯಾ ಕಣ್ಣಿಟ್ಟಿದ್ದು, 5 ವಿಮಾನಗಳನ್ನು ಗುತ್ತಿಗೆ ಪಡೆಯಲು ಚಿಂತಿಸಿದೆ.

ಏರ್​ ಇಂಡಿಯಾ ಮುಖ್ಯಸ್ಥ ಅಶ್ವಿನಿ ಲೋಹಾನಿ: ಚಿತ್ರ ಕೃಪೆ ಟ್ವಿಟ್ಟರ್​

ಮುಂಬೈ: ತೀವ್ರ ಹಣಕಾಸು ಮುಗ್ಗಟ್ಟಿನಿಂದ ದಿವಾಳಿ ತುತುದಿಗೆ ತಲುಪಿದ ಜೆಟ್​ ಏರ್​ವೇಸ್​ ಸಂಸ್ಥೆಯ ವಿಮಾನ ಹಾರಾಟ ಸೇವೆಯ ಸ್ಥಗಿತದ ಬೆನ್ನಲ್ಲೇ ಏರ್​ ಇಂಡಿಯಾ ಅಧ್ಯಕ್ಷ ಅಶ್ವಿನಿ ಲೋಹಾನಿ ಅವರು ಸ್ಟೇಟ್​ ಬ್ಯಾಂಕ್​ ಅಧ್ಯಕ್ಷ ಮುಖ್ಯಸ್ಥಕ ರಜನಿಶ್ ಕುಮಾರ್​ ಅವರನ್ನು ಭೇಟಿ ಮಾಡಲಿದ್ದಾರೆ. ವಿಮಾನಯಾನ- ಹಣಕಾಸು ಸಂಸ್ಥೆ ಉದ್ದಿಮೆಗಳ ಭೇಟಿ ಬಗ್ಗೆ ಏರ್​ ವೇಸ್​ ಉದ್ಯಮದಲ್ಲಿ ತೀವ್ರ ಕುತೂಹಲ ಮೂಡಿದೆ.

ಜೆಟ್​ ಸಂಸ್ಥೆಯ ಜವಾಬ್ದಾರಿ ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟ ಮೇಲಿದ್ದು, ಏರ್​ ಇಂಡಿಯಾ ಅಧ್ಯಕ್ಷರು ಬಾಡಿಗೆ ಇಂಗಿತ ವ್ಯಕ್ತಪಡಿಸಿ ಬುಧವಾರ ಎಸ್​ಬಿಐ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. 'ಜೆಟ್​ನ ಐದು ಬೋಯಿಂಗ್ 777 ವಿಮಾಲನಗಳನ್ನು ಬಾಡಿಗೆ ತೆಗೆದುಕೊಂಡು ಪ್ರಮುಖ ಅಂತಾರಾಷ್ಟ್ರೀಯ ಮಾರ್ಗದಲ್ಲಿ ನಿಯೋಜಿಸಲು ಆಸಕ್ತಿ ಹೊಂದಿದ್ದೇವೆ' ಎಂದು ಒಕ್ಕಣಿಕೆಯಲ್ಲಿ ತಿಳಿಸಿದ್ದಾರೆ.

ಇಂದು ಉಭಯ ಸಂಸ್ಥೆಗಳ ಮುಖ್ಯಸ್ಥರು ದೆಹಲಿಯಲ್ಲಿ ಭೇಟಿಯಾಗಲಿದ್ದು, ಈ ಬಗ್ಗೆ ತೀರ್ಮಾನಕ್ಕೆ ಬರಲಿದ್ದಾರೆ. ಏರ್​ ಇಂಡಿಯಾ ತನ್ನ ಅಂತಾರಾಷ್ಟ್ರೀಯ ಸೇವಾ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಆಸಕ್ತಿ ತಳೆದಿದೆ. ಅದರ ಮಹತ್ವಕಾಂಕ್ಷೆ ಜಾರಿಗೆ ಬಂದರೆ ಎಐ, ಹೊಸ ಮಾರ್ಗಗಳನ್ನು ಕಂಡಕೊಳ್ಳಲಿದೆ. ಜೆಟ್ ಸಾಲದಾತರಿಗೆ ತಮ್ಮ ಹಣ ಮರಳಿಪಡೆಯಲು ಇದು ಅನಕೂಲವಾಗಬಹುದು ಎಂದು ಉದ್ಯಮ ವಲಯ ನಿರೀಕ್ಷಿಸುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.