ETV Bharat / bharat

AIMIM ಪಕ್ಷದ ನಾಯಕ ಕೋವಿಡ್‌ನಿಂದ ಗುಣಮುಖ: ಮಾಸ್ಕ್, ಅಂತರ ಮರೆತು ಬೆಂಬಲಿಗರ ಸಂಭ್ರಮ! - ಎಐಎಂಐಎಂ ನಾಯಕ ಅಖಿಲ್ ಸೇಥ್

ಎಐಎಂಐಎಂ ನಾಯಕ ಅಖಿಲ್ ಸೇಥ್‌ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಮನೆಗೆ ಆಗಮಿಸಿದ್ದರು. ಈ ವೇಳೆ ಅವರ ನಿವಾಸದ ಎದುರು ಪಕ್ಷದ ನಾಯಕರು, ಬೆಂಬಲಿಗರು ಸಾಮಾಜಿಕ ಅಂತರ, ಮಾಸ್ಕ್‌ ಮರೆತು ಸಂಭ್ರಮಿಸಿರುವ ಘಟನೆ ನಡೆದಿದೆ.

aimim-
ಕೋವಿಡ್
author img

By

Published : Jul 6, 2020, 11:24 PM IST

ಮುಂಬೈ: ದೇಶದ ವಾಣಿಜ್ಯ ನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ನಗರದಲ್ಲಿ ಕೊರೊನಾ ಸಂಖ್ಯೆ ಲಕ್ಷದ ಹತ್ತಿರ ಬಂದಿದೆ. ಈ ನಡುವೆ ಇಲ್ಲಿನ ವಿಜಯಪುರ ತಾಲೂಕು ಪ್ರದೇಶದಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪಕ್ಷದ ನಾಯಕರು, ಮುಖಂಡರು ಸಾಮಾಜಿಕ ಅಂತರ ಮರೆತು ದೊಡ್ಡ ಪ್ರಮಾಣದಲ್ಲಿ ಸೇರಿ ಕೊರೊನಾ ಮತ್ತಷ್ಟು ಹೆಚ್ಚು ಹರಡಲು ಅನುವು ಮಾಡಿಕೊಟ್ಟಿದ್ದಾರೆ.

ಪಕ್ಷದ ನಾಯಕ ಅಖಿಲ್ ಸೇಥ್‌ ಅವರ ಮನೆ ಮುಂದೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಈ ವೇಳೆ ಕೊರೊನಾ ಹರಡುವುದನ್ನು ತಡೆಯಲು ಅನುಸರಿಸಬೇಕಾದ ಬಹುಮುಖ್ಯ ನಿಯಮ ಸಾಮಾಜಿಕ ಅಂತರ ನಿರ್ಲಕ್ಷಿಸಿದ್ದು ಕಂಡು ಬಂತು. ತಮ್ಮ ನಾಯಕ ಕೊರೊನಾ ಮುಕ್ತರಾಗಿ ಮನೆಗೆ ಆಗಮಿಸಿದ್ದು, ಅನೇಕ ಮುಂದಿ ಜಮಾವಣೆಗೊಂಡಿದ್ದರು. ಪಟಾಕಿ ಸಿಡಿಸಿ, ಕೇಕೆ, ಶಿಳ್ಳೆ ಹಾಕಿ ಅವರೆಲ್ಲ ಸಂಭ್ರಮಿಸಿದ್ದಾರೆ. ಈ ವೇಳೆ ಅಲ್ಲಿದ್ದ ಅನೇಕರು ಮುಖಕ್ಕೆ ಮಾಸ್ಕ್‌ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೇ ಗಾಳಿಗೆ ತೋರಿದ್ದಾರೆ.

ಮೂಲಗಳ ಪ್ರಕಾರ, ಅಖಿಲ್ ಸೇಥ್‌ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈ ವೇಳೆ ಈ ಘಟನೆ ಜರುಗಿದೆ. ಈ ಸಂಭ್ರಮಾಚರಣೆಯಲ್ಲಿ ವಿಜಯಪುರದ ಉಪ ಮೇಯರ್ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸದ್ಯ 2.06 ಲಕ್ಷ ಸೋಂಕಿತ ಪ್ರಕರಣಗಳಿದ್ದು, 8,822 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.