ಅಹಮದಾಬಾದ್(ಗುಜರಾತ್): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಕಾರ್ಯಕ್ಕಾಗಿ ಎಲ್ಲೆಡೆಯಿಂದ ದೇಣಿಗೆ ಹರಿದು ಬರುತ್ತಿದ್ದು, ಇದೀಗ ಗುಜರಾತ್ನ ಜೈನ ಸಮುದಾಯವೊಂದು 24 ಕೆ.ಜಿ ಬೆಳ್ಳಿ ಇಟ್ಟಿಗೆಗಳನ್ನ ದೇಣಿಗೆ ರೂಪದಲ್ಲಿ ನೀಡಿದೆ.
ರಾಮ ಮಂದಿರಕ್ಕಾಗಿ 1 ಕೋಟಿ ರೂ. ದೇಣಿಗೆ... ಬಾಳಾಸಾಹೇಬ್ ವಾಗ್ದಾನ ಉಳಿಸಿಕೊಂಡಿದ್ದೇವೆಂದ ಶಿವಸೇನೆ!
ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೀಗ ಜೈನ ಸಮುದಾಯ 24 ಕೆ.ಜಿ ಚಿನ್ನದ ಇಟ್ಟಿಗೆಗಳನ್ನ ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೈಗೆ ಹಸ್ತಾಂತರ ಮಾಡಿದೆ.
ಈ ವೇಳೆ ಮಾತಾನಾಡಿರುವ ಜೈನ ಮುನಿಯೊಬ್ಬರು, ನಮ್ಮ ಸಮುದಾಯ ಸೇರಿದಂತೆ ಇಡೀ ದೇಶವೇ ದೇವಸ್ಥಾನದ ನಿರ್ಮಾಣಕ್ಕಾಗಿ ಕಾತುರದಿಂದ ಕಾಯುತ್ತಿವೆ. ದೇವಸ್ಥಾನದ ನಿರ್ಮಾಣಕ್ಕಾಗಿ ನಮ್ಮ ಕೈಯಿಂದ ಆದಷ್ಟು ಸಹಾಯ ಮಾಡಿದ್ದೇವೆ ಎಂದಿದ್ದಾರೆ. ಆಗಸ್ಟ್ 5 ದೇಶದ ಇತಿಹಾಸದಲ್ಲಿ ಐತಿಹಾಸಿಕ ದಿನ. ಅದು ನಮ್ಮ ಸಮುದಾಯ ಮನೆ ಮನೆಯಲ್ಲಿ ದೀಪ ಬೆಳಗಿಸಲಿದೆ ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಮೊಘಲ್ ವಂಶಸ್ಥರೊಬ್ಬರು ಚಿನ್ನದ ಇಟ್ಟಿಗೆ ಕಾಣಿಕೆ ನೀಡಿದ್ದಾರೆ. ಮೊಘಲ್ ವಂಶಸ್ಥ ಎಂದು ಗುರುತಿಸಿಕೊಳ್ಳುವ ಯಾಕೂಬ್ ಹಬೀದುದ್ದೀನ್ ಟೂಸಿ ಈ ಕಾಣಿಕೆ ನೀಡಿದ್ದಾರೆ.