ETV Bharat / bharat

ಪುಲ್ವಾಮಾದಲ್ಲಿ ಗುಂಡಿನ ಬದಲು ಸಂಗೀತ ನಾದ: ಇದು 'ತ್ರಿಮೂರ್ತಿ'ಗಳ ಸಾಧನೆ! - ಫಾಲ್ಕನ್

ಪುಲ್ವಾಮಾದ ಪಿಂಗ್ಲೆನಾ ಪ್ರದೇಶದ ಮೂವರು ಯುವಕರು 'ಫಾಲ್ಕನ್' ಎಂಬ ಬ್ಯಾಂಡ್​ ರಚಿಸಿದ್ದು, ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮೂವರು ಯುವಕರ 'ಫಾಲ್ಕನ್' ಬ್ಯಾಂಡ್​
ಮೂವರು ಯುವಕರ 'ಫಾಲ್ಕನ್' ಬ್ಯಾಂಡ್​
author img

By

Published : Aug 26, 2020, 9:19 AM IST

ಪುಲ್ವಾಮಾ: ಕಾಶ್ಮೀರ ಕಣಿವೆಯಲ್ಲಿನ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಇಲ್ಲಿನ ಅನೇಕ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ ಇಲ್ಲಿನ ಕೆಲ ಯುವಕರು ಮಾತ್ರ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಲು ಹೊರಟಿದ್ದಾರೆ.

ಪುಲ್ವಾಮಾದ ಪಿಂಗ್ಲೆನಾ ಪ್ರದೇಶದ ಮೂವರು ಯುವಕರು 'ಫಾಲ್ಕನ್' ಎಂಬ ಬ್ಯಾಂಡ್​ ರಚಿಸಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಬೇಕಾದ ಉಪಕರಣಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿದ್ದಾರೆ.

ಯುವಕರು ಮಾತನಾಡಿ, ಕಾಶ್ಮೀರದ ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ಯಾವುದೇ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದ್ದಾರೆ. "ಹೆಚ್ಚಿನ ಕಲಾವಿದರು ತಮ್ಮ ಸ್ವಂತ ಹಣದಿಂದ ಉಪಕರಣಗಳನ್ನು ಖರೀದಿಸುತ್ತಾರೆ ಮತ್ತು ಪ್ರದರ್ಶನಗಳನ್ನು ನಡೆಸುತ್ತಾರೆ" ಎಂದರು.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರೂ ಸಹ ಈ ಯುವಕರು ಧ್ಯೇಯ ಬಿಡದೆ ಧೈರ್ಯ ಮತ್ತು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ.

ಈ ಹಿಂದೆ ಇಲ್ಲಿ ಕಾಶ್ಮೀರಿ ಹಾಡುಗಳನ್ನು ಮಾತ್ರ ಹಾಡಲಾಗಿದ್ದರೂ ಈಗ ಇಲ್ಲಿನ ಯುವಕರು ಬಾಲಿವುಡ್ ಮತ್ತು ಹಾಲಿವುಡ್ ಶೈಲಿಯ ಹಾಡುಗಳನ್ನು ಸಹ ಹಾಡಲು ಪ್ರಾರಂಭಿಸಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.