ETV Bharat / bharat

ಎಸ್​ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ವದಂತಿ: ಸ್ಪಷ್ಟನೆ ನೀಡಿದ ಪುತ್ರ ಚರಣ್ - ಎಸ್​ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ವದಂತಿ

ಗಾನ ಗಂಧರ್ವ ಎಸ್ ​ಪಿ ಬಾಲಸುಬ್ರಹ್ಮಣ್ಯಂ ಅವರ ಚಿಕಿತ್ಸಾ ವೆಚ್ಚದ ಬಗ್ಗೆ ಹಬ್ಬುತ್ತಿರುವ ಗಾಳಿ ಸುದ್ದಿಗಳ ಬಗ್ಗೆ ಅವರ ಪುತ್ರ ಎಸ್​ಪಿ ಚರಣ್ ಸ್ಪಷ್ಟನೆ ನೀಡಿದ್ದಾರೆ.

rumours on SP Balasubrahmanyam's treatment cost
ಎಸ್​ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ವದಂತಿ
author img

By

Published : Sep 28, 2020, 2:12 PM IST

Updated : Sep 28, 2020, 6:12 PM IST

ಚೆನ್ನೈ: ಶುಕ್ರವಾರ ನಿಧನರಾದ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್‌ ಪಿ ಚರಣ್ ತಮ್ಮ ತಂದೆಯ ಚಿಕಿತ್ಸೆಯ ವೆಚ್ಚದ ಬಗ್ಗೆ ಹಬ್ಬುತ್ತಿರುವ ವದಂತಿಗಳ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

ಎಸ್​ಪಿಬಿ ಚಿಕಿತ್ಸೆಗೆ ಚೆನ್ನೈನ ಪ್ರತಿಷ್ಟಿತ ಆಸ್ಪತ್ರೆ ಭಾರಿ ಮೊತ್ತದ ಬಿಲ್ ಮಾಡಿದೆ, ಎಲ್ಲಾ ಹಣವನ್ನು ನೀಡುವವರೆಗೆ ಪಾರ್ಥಿವ ಶರೀರ ನೀಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹಬ್ಬುತ್ತಿವೆ. ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸ್ಪಷ್ಟನೆ ನೀಡಿರುವ ಎಸ್​ಪಿಬಿ ಪುತ್ರ ಚರಣ್, ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್​ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ವದಂತಿ: ಸ್ಪಷ್ಟನೆ ನೀಡಿದ ಪುತ್ರ ಚರಣ್

ಜನರು ಏಕೆ ಈ ರೀತಿ ಮಾಡುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಇದು ಜನರಿಗೆ ಇದು ನೋವುಂಟು ಮಾಡುತ್ತದೆ. ಖಂಡಿತವಾಗಿಯೂ ಈ ಕೃತ್ಯವನ್ನು ಎಸಗಿರುವವರು ಎಸ್‌ಪಿಬಿ ಅಭಿಮಾನಿಯಲ್ಲ, ಏಕೆಂದರೆ ಎಸ್‌ಪಿಬಿ ಅಭಿಮಾನಿ ಎಂದಿಗೂ ಈ ರೀತಿಯ ಕೃತ್ಯ ಎಸಗಲ್ಲ. ಅವರು ಇತರರನ್ನು ನೋಯಿಸುವ ವ್ಯಕ್ತಿಯಲ್ಲ, ಅವನು ಕ್ಷಮಿಸುವ ವ್ಯಕ್ತಿ. ನಾನು ಈ ವ್ಯಕ್ತಿಯನ್ನು ಕ್ಷಮಿಸುತ್ತೇನೆ ಎಂದಿದ್ದಾರೆ.

ವದಂತಿಗಳನ್ನು ಹರಡಿದ ವ್ಯಕ್ತಿಗೆ ಈ ವದಂತಿಯನ್ನು ಹರಡಲು ಯಾವುದೇ ಆಧಾರವಿಲ್ಲ. ಒಬ್ಬ ವ್ಯಕ್ತಿಯ ಕೃತ್ಯದಿಂದ ಎಷ್ಟು ಅನಾನುಕೂಲತೆ ಉಂಟಾಗುತ್ತದೆ. ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ, ದೇವರು ನಿಮ್ಮನ್ನು ನೋಡಿಕೊಳ್ಳುತ್ತಾನೆ ಎಂದಿದ್ದಾರೆ.

Last Updated : Sep 28, 2020, 6:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.