ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದೆ. ಪಕ್ಷದ ಹಲವು ಘಟಕಗಳ ಕಾರ್ಯಾಚರಣೆಗೆ ನೀಡಲಾಗುತ್ತಿದ್ದ ಅನುದಾನದಲ್ಲಿ ಕಡಿತ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೆ ಕಾಂಗ್ರೆಸ್ ಹಲವು ಘಟಕಗಳಿಗೆ ಖರ್ಚು ಕಡಿಮೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಸೇವಾ ದಳಕ್ಕೆ ನೀಡಲಾಗುತ್ತಿದ್ದ ಮಾಸಿಕ ಮೊತ್ತವನ್ನು 2.5 ಲಕ್ಷದಿಂದ 2 ಲಕ್ಷಕ್ಕೆ ಇಳಿಸಲಾಗಿದೆ. ಅಂತೆಯೆ, ಮಹಿಳಾ ಘಟಕ, ಯುವ ಘಟಕಗಳ ಅನುದಾನದಲ್ಲಿಯೂ ಕಡಿತವಾಗಿದ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೂ ಕೆಲ ತಿಂಗಳಿನಿಂದ ಸಂಬಳ ಸಿಕ್ಕಿಲ್ಲ ಎಂಬ ಆರೋಪವೂ ಹೇಳಿಬಂದಿದೆ. ಮಾಧ್ಯಮ ಘಟಕಕ್ಕೂ ಇದೇ ಸಮಸ್ಯೆ ಎದುರಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.