ಮುಂಬೈ (ಮಹಾರಾಷ್ಟ್ರ): ನಿಸರ್ಗ ಚಂಡಮಾರುತ ಮತ್ತು ಅದರ ಜೊತೆಗಿನ ಮಳೆಯು ಮುಂಬೈನಲ್ಲಿ ಒಟ್ಟಾರೆ ವಾಯು ಗುಣಮಟ್ಟದ ಸೂಚ್ಯಂಕದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ವರ್ಷದಲ್ಲೇ ಅತ್ಯುತ್ತಮ ಗುಣಮಟ್ಟ ದಾಖಲಾಗಿದೆ.
ನೆರೆಯ ರಾಯ್ಗಡ ಜಿಲ್ಲೆಯ ಅಲಿಬಾಗ್ ಬಳಿ ಚಂಡಮಾರುತ ಅಪ್ಪಳಿಸಿದ ನಂತರ ಮುಂಬೈನಲ್ಲಿ ಇಂದೂ ಕೂಡ ಮಳೆ ಸುರಿಯುತ್ತಲೇ ಇತ್ತು. ಮುಂಬೈನ ಪ್ರಸ್ತುತ ವಾಯು ಗುಣಮಟ್ಟವು ಉತ್ತಮ ಮಟ್ಟದಲ್ಲಿದೆ. ಇದು ಆರೋಗ್ಯಕ್ಕೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಎಸ್ಎಎಫ್ಎಆರ್) ಸೆಂಟರ್ ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಅತಿ ವೇಗದ ಗಾಳಿ ಮತ್ತು ಅದರ ಜೊತೆಗಿನ ಮಳೆಯ ಸಂಯೋಜನೆಯಿಂದಾಗಿ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಸುಧಾರಿಸಿದೆ. ಇದು ಇಲ್ಲಿಯವರೆಗಿನ ಈ ವರ್ಷದ ಅತ್ಯುತ್ತಮ ದಾಖಲೆಯಾಗಿದೆ ಎಂದು ಎಸ್ಎಎಫ್ಎಆರ್ ನಿರ್ದೇಶಕ ಡಾ. ಗುಫ್ರಾನ್ ಬೀಗ್ ಹೇಳಿದ್ದಾರೆ.