ಜೈಪುರ (ರಾಜಸ್ಥಾನ): ಜೂನ್ 19ರಂದು ರಾಜ್ಯಸಭಾ ಚುನಾವಣೆ ನಡೆಯುವ ದೃಷ್ಟಿಯಿಂದ ರಾಜಸ್ಥಾನ ಕಾಂಗ್ರೆಸ್ ತನ್ನ ಶಾಸಕರು ಜೈಪುರದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ಗೆ ವರ್ಗಾಯಿಸಿದ ಬೆನ್ನಲ್ಲೇ, ಬಿಜೆಪಿ ಕೂಡಾ ತನ್ನ ಶಾಸಕರನ್ನು ಸ್ಥಳಾಂತರಿಸಲು ನಿರ್ಧರಿಸಿದೆ.
ಮೂಲಗಳ ಪ್ರಕಾರ, ಜೈಪುರ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿ ಬಳಿಕ ಅವರನ್ನು ಹವಾನಿಯಂತ್ರಿತ ವೋಲ್ವೋ ಬಸ್‌ಗಳಲ್ಲಿ ಐಷಾರಾಮಿ ಕ್ರೌನ್ ಹೋಟೆಲ್‌ಗೆ ಕಳುಹಿಸಲಾಗತ್ತದೆ.
ಜೂನ್ 19ರವರೆಗೆ ಶಾಸಕರು ಹೋಟೆಲ್‌ನಲ್ಲಿಯೇ ಇರುತ್ತಾರೆ. ಬಳಿಕ ಅವರು ವಿಧಾನಸಭಾ ಚುನಾವಣೆಗೆ ಮುಂದುವರಿಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮತದಾನಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ಸುಮಾರು 200 ಶಾಸಕರನ್ನು 'ರಾಜಕೀಯ ಕ್ವಾರಂಟೈನ್'ನಲ್ಲಿ ಇರಿಸಿದಂತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, "ನಮ್ಮ ಶಾಸಕರನ್ನು ಅವರ ತರಬೇತಿ ಮತ್ತು ಇತರ ಉದ್ದೇಶಗಳಿಗಾಗಿ ಒಂದು ತಿಂಗಳ ಹಿಂದೆಯೇ ರೆಸಾರ್ಟ್‌ಗೆ ಸ್ಥಳಾಂತರಿಸಲು ನಾವು ನಿರ್ಧರಿಸಿದ್ದೇವು. ನಮ್ಮ ಶಾಸಕರಿಗೆ ಮುಂದಿನ ಎರಡು ದಿನಗಳವರೆಗೆ ಮತದಾನ ಮತ್ತು ಶಾಸನ ವಿಷಯಗಳ ಕುರಿತು ತರಬೇತಿ ನೀಡಲಾಗುವುದು" ಎಂದರು.