ETV Bharat / bharat

ಮಿಲಿಟರಿ ಹೆಲಿಕಾಪ್ಟರ್​ ಪತನ: ಅಫ್ಘಾನಿಸ್ತಾನದ ಇಬ್ಬರು ಸೈನಿಕರ ಸಾವು

author img

By

Published : Jan 9, 2020, 8:25 AM IST

ಅಫ್ಘಾನಿಸ್ತಾನದಲ್ಲಿ ಸೇನಾ ಹೆಲಿಕಾಪ್ಟರ್​ ಪತನವಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

chopper crash in farah
ಅಫ್ಘಾನಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ

ಫರಾಹ್​​, ಅಫ್ಘಾನಿಸ್ತಾನ: ಹೆಲಿಕಾಪ್ಟರ್​ ಪತನವಾಗಿ ಇಬ್ಬರು ಸೈನಿಕರು ಸಾವನ್ನಪ್ಪಿರುವ ಘಟನೆ ಅಫ್ಘಾನಿಸ್ತಾನದ ಪೋರ್ಚಾಂ ಜಿಲ್ಲೆಯ ಫರಾಹ್​ ಪ್ರಾಂತ್ಯದಲ್ಲಿ ನಡೆದಿದೆ. ಅಫ್ಘಾನಿಸ್ತಾನದ ಏರ್​ಫೋರ್ಸ್​ಗೆ ಸೇರಿದ ಎಂಐ - 35 ಯುದ್ಧ ಹೆಲಿಕಾಪ್ಟರ್​ ಪತನವಾಗಿದೆ. ಅದರಲ್ಲಿದ್ದ ಇಬ್ಬರೂ ಪೈಲೆಟ್​​ಗಳೂ ಸಾವನ್ನಪ್ಪಿದ್ದು ಪರಿಶೀಲನೆ ನಡೆಯುತ್ತಿದೆ. ಈ ಹೆಲಿಕಾಪ್ಟರ್​ ಸೇನೆಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿತ್ತು ಎಂದು ಫರಾಹ್​ ಪ್ರಾಂತ್ಯದ ಗವರ್ನರ್​ ಮೊಹಮದ್​ ಸ್ಪಷ್ಟಪಡಿಸಿದ್ದಾರೆ. ಅಫ್ಘಾನಿಸ್ತಾನ ರಕ್ಷಣಾ ಇಲಾಖೆಯಿಂದ ಮೃತ ಸೈನಿಕರಿಗೆ ಸಂತಾಪ ಸೂಚಿಸಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.