ETV Bharat / bharat

ಪೋಷಕರನ್ನು ಕೊಂದ ತಾಲಿಬಾನ್​ ಉಗ್ರರನ್ನು ಹತ್ಯೆ ಮಾಡಿದ ಬಾಲಕಿ..! - ತಾಲಿಬಾನ್​ ಬಾಲಕಿ

ತನ್ನ ತಂದೆ, ತಾಯಿಯನ್ನು ಕೊಂದ ತಾಲಿಬಾನ್​ ಉಗ್ರರನ್ನು ಬಾಲಕಿಯೊಬ್ಬಳು ಗುಂಡು ಹಾರಿಸಿ ಕೊಂದ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.

terrorists
ಭಯೋತ್ಫಾದಕರು
author img

By

Published : Jul 22, 2020, 10:22 AM IST

ಕಾಬೂಲ್​ (ಅಫ್ಘಾನಿಸ್ತಾನ): ತನ್ನ ಪೋಷಕರನ್ನು ಕೊಂದಿದ್ದಕ್ಕೆ ಬಾಲಕಿಯೊಬ್ಬಳು ಇಬ್ಬರು ತಾಲಿಬಾನ್​ ಉಗ್ರರನ್ನು ಹತ್ಯೆ ಮಾಡಿದ ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದೆ.

ಕಳೆದ ವಾರ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದ ಆರೋಪದಲ್ಲಿ ಬಾಲಕಿ ಖಮರ್ ಗುಲ್ ಪೋಷಕರನ್ನು ಮನೆಯಿಂದ ಹೊರಗೆಳೆದು ತಂದು ತಾಲಿಬಾನ್​ ಉಗ್ರರು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಂಡ ಬಾಲಕಿ ಬಂದೂಕಿನಿಂದ ಇಬ್ಬರು ಉಗ್ರರನ್ನು ಹೊಡೆದುರಳಿಸಿದ್ದಾಳೆ. ಮತ್ತೆ ಕೆಲವು ಉಗ್ರರು ಗಾಯಗೊಂಡಿದ್ದಾರೆ.

ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಕ್ಕೆ ಗ್ರಾಮದ ಮುಖ್ಯಸ್ಥನಾಗಿದ್ದ ಬಾಲಕಿಯ ತಂದೆಯನ್ನು ಕೊಲ್ಲಲು ತಾಲಿಬಾನ್​ ಉಗ್ರರು ಸಂಚು ರೂಪಿಸಿದ್ದರು. ಈ ವೇಳೆ, ಮನೆಗೆ ನುಗ್ಗಿ ಆತನನ್ನು ಹೊರಗೆಳೆದು ತಂದು ಹತ್ಯೆ ಮಾಡಿದ್ದರು. ಈ ವೇಳೆ, ಪ್ರತಿರೋಧ ವ್ಯಕ್ತಪಡಿಸಿದ ಆಕೆಯ ಪತ್ನಿಯನ್ನು ಕೂಡಾ ಕೊಂದಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಖಮರ್ ಗುಲ್ ಈ ವೇಳೆ ಮನೆಯೊಳಗೆ ಇದ್ದು, ಎಕೆ-47 ಗನ್​ನಿಂದ ತಾಲಿಬಾನ್​ ಉಗ್ರರ ಕಡೆ ಗುಂಡು ಹಾರಿಸಿದ್ದಾಳೆ. ಈ ವೇಳೆ ಇಬ್ಬರು ಉಗ್ರರು ಕೊಲ್ಲಲ್ಪಟ್ಟಿದ್ದು, ಮತ್ತೆ ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.