ಲಖನೌ(ಉತ್ತರ ಪ್ರದೇಶ): ಹಥ್ರಾಸ್ ಪ್ರಕರಣ ಕುರಿತಂತೆ ಸಂತ್ರಸ್ತೆಯ ಕುಟುಂಬ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್‌ನ ಲಖನೌ ಪೀಠ ತಿಳಿಸಿತ್ತು. ಕೋರ್ಟ್ಗೆ ನೇರವಾಗಿ ವಿಚಾರಣೆಗೆ ಹಾಜರಾಗುವುದನ್ನು ವಕೀಲರು ಖಂಡಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಯುವ ಮುನ್ನ ವಕೀಲರು, ಕೊರೊನಾ ಕಾರಣದಿಂದಾಗಿ ಹೈಕೋರ್ಟ್‌ನ ಲಖನೌ ಪೀಠದಲ್ಲಿ ನೇರವಾಗಿ ವಿಚಾರಣೆ ನಡೆದಿಲ್ಲ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕವೇ ವಿಚಾರಣೆಯ ಕಾರ್ಯವಿಧಾನ ನಡಿಯುತ್ತಿತ್ತು. ಆದ್ರೆ ಹಥ್ರಾಸ್ ವಿಷಯದಲ್ಲಿ ಮಾತ್ರ ನೇರ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಿರ್ಭಯಾ ಪ್ರಕರಣದಲ್ಲಿ ವಾದಿಸಿದ್ದ ಸೀಮಾ ಕುಶ್ವಾಹ ಹೈಕೋರ್ಟ್ ತಲುಪಿದ್ದು, ಹತ್ರಾಸ್ ಪ್ರಕರಣದಲ್ಲಿ ವಾದಿಸುವುದಾಗಿ ಹೇಳಿದ್ದರು. ಅಲ್ಲದೇ ಕೋರ್ಟ್ ಮುಂದೆ ತಮ್ಮ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಒಂದು ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಎರಡನೇಯದು ಪ್ರಕರಣವನ್ನು ಯುಪಿಯಿಂದ ದೆಹಲಿ ಅಥವಾ ಮುಂಬೈಗೆ ವರ್ಗಾಯಿಸಬೇಕು. ಮೂರನೇಯದಾಗಿ ಶೋಷಣೆಗೆ ಒಳಗಾದವರು ಹಾಗೂ ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದ ಕ್ರಮವನ್ನು ಗೌಪ್ಯವಾಗಿಡಬೇಕು ಎಂದಿದ್ದಾರೆ.