ETV Bharat / bharat

ಅಯೋಧ್ಯೆ ಭೂಮಿ ಪೂಜೆಗೆ ಅಡ್ವಾಣಿ, ಜೋಶಿಗೂ ಆಹ್ವಾನ ; ರಾಮಜನ್ಮಭೂಮಿ ಟ್ರಸ್ಟ್ ಸ್ಪಷ್ಟನೆ

ರಾಮ ಮಂದಿರ ನಿರ್ಮಾಣದ ಬಗ್ಗೆ ಧ್ವನಿ ಎತ್ತಿರುವ ಬಿಜೆಪಿ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಭೂಮಿ ಪೂಜೆಗೆ ಆಹ್ವಾನಿಸುತ್ತಿಲ್ಲ ಎಂಬ ವರದಿಗಳು ಅನಗತ್ಯವಾಗಿ ವಿವಾದ ಸೃಷ್ಟಿಸುವ ಗುರಿ ಹೊಂದಿವೆ..

L.K. Advani
ಅಡ್ವಾಣಿ, ಜೋಶಿ
author img

By

Published : Aug 2, 2020, 7:41 PM IST

Updated : Aug 2, 2020, 7:46 PM IST

ನವದೆಹಲಿ : ಬಿಜೆಪಿ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಸೇರಿದಂತೆ ರಾಮ ಮಂದಿರ ನಿರ್ಮಾಣ ಆಂದೋಲನಕ್ಕೆ ಸಂಬಂಧಿಸಿದ ಎಲ್ಲ ಗಣ್ಯ ವ್ಯಕ್ತಿಗಳನ್ನು ಅಯೋಧ್ಯೆ ಭೂಮಿಗೆ ಪೂಜೆಗೆಂದು ಆಹ್ವಾನಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಉಸ್ತುವಾರಿ ಪ್ರಕಾಶ್ ಕುಮಾರ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ರಾಮ ಮಂದಿರ ನಿರ್ಮಾಣದ ಬಗ್ಗೆ ಧ್ವನಿ ಎತ್ತಿರುವ ಬಿಜೆಪಿ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಭೂಮಿ ಪೂಜೆಗೆ ಆಹ್ವಾನಿಸುತ್ತಿಲ್ಲ ಎಂಬ ವರದಿಗಳು ಅನಗತ್ಯವಾಗಿ ವಿವಾದ ಸೃಷ್ಟಿಸುವ ಗುರಿ ಹೊಂದಿವೆ. ಇದು ಸುಳ್ಳು. ದೇವಾಲಯ ನಿರ್ಮಾಣ ಆಂದೋಲನಕ್ಕೆ ಸಂಬಂಧಿಸಿದ ಎಲ್ಲ ಶ್ರೇಷ್ಠ ವ್ಯಕ್ತಿಗಳಿಗೆ ಆಮಂತ್ರಣ ಕಳುಹಿಸಲಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಅಡ್ವಾಣಿ, ಜೋಶಿ ಸೇರಿ ಎಲ್ಲ ಪ್ರಮುಖ ವ್ಯಕ್ತಿಗಳನ್ನು ಇ-ಮೇಲ್ ಮೂಲಕ ಆಹ್ವಾನಿಸಲಾಗಿದೆ ಹಾಗೂ ದೂರವಾಣಿ ಮೂಲಕವೂ ಮಾಹಿತಿ ನೀಡಲಾಗಿದೆ. ಕೊರೊನಾ ಮತ್ತು ಆರೋಗ್ಯ ಕಾರಣಗಳಿಂದಾಗಿ ಕೆಲ ವಿಶೇಷ ಆಹ್ವಾನಿತರು ಭೂಮಿ ಪೂಜೆಗೆ ಬರಲು ಸಾಧ್ಯವಾಗದಿರಬಹುದು. ಅಥವಾ ದೀರ್ಘ ಪ್ರಯಾಣ ಕೈಗೊಳ್ಳಲು ಕಷ್ಟವಾಗಬಹುದು. ಆದರೆ, ಅಗತ್ಯ ವ್ಯಕ್ತಿತ್ವಗಳನ್ನು ಆಹ್ವಾನಿಸದಿರುವ ಪ್ರಶ್ನೆಯೇ ಇಲ್ಲ. ಟ್ರಸ್ಟ್ ಎಲ್ಲರ ಭಾವನೆಗಳನ್ನು ಗೌರವಿಸುತ್ತದೆ ಎಂದು ಗುಪ್ತಾ ಹೇಳಿಕೆ ನೀಡಿದ್ದಾರೆ.

Last Updated : Aug 2, 2020, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.