ಹೈದರಾಬಾದ್: ವಿಮಾ ವೈದ್ಯಕೀಯ ಸೇವೆಗಳ (ಐಎಂಎಸ್) ಮಾಜಿ ನಿರ್ದೇಶಕಿ ದೇವಿಕಾ ರಾಣಿ ಮತ್ತು ಫಾರ್ಮಸಿಸ್ಟ್ ನಾಗಲಕ್ಷ್ಮಿ ಎಂಬುವವರಿಂದ 2.29 ಕೋಟಿ ರೂ.ಗಳನ್ನು ಭ್ರಷ್ಟಾಚಾರ ನಿಗ್ರಹ ದಳ ವಶಪಡಿಸಿಕೊಂಡಿದೆ.
ಆರೋಪಿಗಳಿಬ್ಬರೂ ಅಕ್ರಮ ಹಣವನ್ನು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಆರು ವಸತಿ ಫ್ಲ್ಯಾಟ್‌ಗಳ ಖರೀದಿಗೆ ಮತ್ತು ಸುಮಾರು 15,000 ಚದರ ಅಡಿ ವಾಣಿಜ್ಯ ಜಾಗ ಖರೀದಿಗೆ ಹೂಡಿಕೆ ಮಾಡಿದ್ದಾರೆ.
ಅಸಮರ್ಪಕ ಆಸ್ತಿ ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಹೈದರಾಬಾದ್‌ನ ಎಸ್‌ಪಿಇ ಮತ್ತು ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.