ನವದೆಹಲಿ: ಫೆಬ್ರವರಿ 8ರಂದು ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಆಮ್ ಆದ್ಮಿ ಕಣಕ್ಕಿಳಿಸುವ ಮೊದಲ ಪಟ್ಟಿ ರಿಲೀಸ್ ಮಾಡಿದೆ.
-
Aam Aadmi Party (AAP) releases the list of candidates for #DelhiElections2020. Chief Minister Arvind Kejriwal to contest from New Delhi, Deputy CM Manish Sisodia to contest from Patparganj. pic.twitter.com/Blkm5JX2tD
— ANI (@ANI) January 14, 2020 " class="align-text-top noRightClick twitterSection" data="
">Aam Aadmi Party (AAP) releases the list of candidates for #DelhiElections2020. Chief Minister Arvind Kejriwal to contest from New Delhi, Deputy CM Manish Sisodia to contest from Patparganj. pic.twitter.com/Blkm5JX2tD
— ANI (@ANI) January 14, 2020Aam Aadmi Party (AAP) releases the list of candidates for #DelhiElections2020. Chief Minister Arvind Kejriwal to contest from New Delhi, Deputy CM Manish Sisodia to contest from Patparganj. pic.twitter.com/Blkm5JX2tD
— ANI (@ANI) January 14, 2020
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಸಲದ ಚುನಾವಣೆಯಲ್ಲಿ ನವದೆಹಲಿಯಿಂದ ಸ್ಪರ್ಧಿಸಲಿದ್ದು, ಡೆಪ್ಯುಟಿ ಸಿಎಂ ಮನೀಷ್ ಸಿಸೋಡಿಯಾ ಪ್ರತಾಪಗಢದಿಂದ ತಮ್ಮ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ. ವಿಶೇಷ ಅಂದ್ರೆ, ಎಲ್ಲಾ 70 ಕ್ಷೇತ್ರಗಳಿಗೂ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಆಮ್ ಆದ್ಮಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯ ವಿಶೇಷತೆಗಳೇನು?
- ಕಣದಲ್ಲಿದ್ದಾರೆ 46 ಮಂದಿ ಹಾಲಿ ಶಾಸಕರು.
- 15 ಜನ ಹಾಲಿ ಶಾಸಕರಿಗೆ ದೊರೆತಿಲ್ಲ ಟಿಕೆಟ್
- ಚುನಾವಣೆಯಲ್ಲಿ 9 ಮಂದಿ ಹೊಸಬರಿಗೆ ಸಿಕ್ತು ಅವಕಾಶ
- ಕಳೆದ ಬಾರಿ 6 ಮಂದಿ ಮಹಿಳೆಯರನ್ನು ಕಣಕ್ಕಿಳಿಸಿದ್ದ AAP ಈ ಬಾರಿ 8 ಮಹಿಳೆಯರನ್ನು ಅಖಾಡಕ್ಕಿಳಿಸಿದೆ.
ಕಳೆದ ಚುನಾವಣೆಯಲ್ಲಿ ಫಲಿತಾಂಶ ಹೇಗಿತ್ತು?
ಕಳೆದ (2015) ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಆಮ್ ಆದ್ಮಿ ಪಾರ್ಟಿ ದಿಲ್ಲಿಯ ಗದ್ದುಗೆಗೇರಿತ್ತು. ಬಿಜೆಪಿ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದರೆ, 1998ರಿಂದ 2013ರವರೆಗೂ 15 ವರ್ಷ ರಾಜಧಾನಿಯಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಕೈ ಪಾಳಯ ಒಂದೂ ಕ್ಷೇತ್ರವನ್ನೂ ಗೆಲ್ಲಲಾಗದೆ ಮುಖಭಂಗ ಅನುಭವಿಸಿತ್ತು.