ನವದೆಹಲಿ: ಪಾನ್ ಮತ್ತು ಆಧಾರ್ ಜೋಡಣೆ ಮಾಡಲು ನೀಡಲಾಗಿದ್ದ ಸಮಯಾವಕಾಶ ವಿಸ್ತರಣೆ ಮಾಡಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಆದೇಶ ಹೊರಡಿಸಿದೆ. ಇದರಿಂದ ಗ್ರಾಕರಿಗೆ ಮತ್ತಷ್ಟು ನಿರಾಳವಾಗಿದೆ.
ಈಗಾಗಲೇ ನೀಡಲಾಗಿದ್ದ ಸಮಯದ ಪ್ರಕಾರ ಡಿಸೆಂಬರ್ 31(ನಾಳೆ)ರೊಳಗೆ ಪಾನ್ ಕಾರ್ಡ್ ಸಂಖ್ಯೆಗೆ ಆಧಾರ್ ಕಾರ್ಡ್ ಜೋಡನೆ ಮಾಡುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಅವಧಿ ವಿಸ್ತರಿಸಲಾಗಿದ್ದು, ಮುಂದಿನ ವರ್ಷ ಮಾರ್ಚ್ 31ರವರೆಗೆ ಜೋಡಣೆ ಮಾಡಬಹುದಾಗಿದೆ.
ಈ ಹಿಂದೆ ಸಹ ಹಲವು ಸಲ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಜೋಡನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆ ಅವಕಾಶವನ್ನ 2019ರ ಡಿಸೆಂಬರ್ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಇದೀಗ ಆ ಅವಧಿಯಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಬರೊಬ್ಬರಿ 7 ಬಾರಿ ಪಾನ್ ಜತೆ ಆಧಾರ್ ಲಿಂಕ್ ಮಾಡಲು ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೂ ನಿರೀಕ್ಷಿತ ಮಟ್ಟದಲ್ಲಿ ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗದ ಕಾರಣ ಮತ್ತೆ ಅವಧಿ ವಿಸ್ತರಿಸಲಾಗಿದೆ.