ಪಾಲಕ್ಕಾಡ್ ( ಕೇರಳ): ಬುಲ್ಡೋಝರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕಾಡಾನೆಯೊಂದು ಜಿಲ್ಲೆಯ ಶೋಲಾಯೋರ್ ಪ್ರದೇಶದಲ್ಲಿ ಮೃತಪಟ್ಟಿದೆ.
ಆನೆ ಮೂರು ವಾರಗಳಿಂದ ಬಾಯಿ ನೋವಿನಿಂದ ಬಳಲುತ್ತಿತ್ತು. ಹೀಗಾಗಿ ಅದಕ್ಕೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಕೆಲ ತಿಂಗಳಿನಿಂದ ಈ ಆನೆ ಶೋಲಾಯೋರ್ ಪ್ರದೇಶದ ಮನೆ , ಕಟ್ಟಡಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿತ್ತು. ಆ ಬಳಿಕ ಸ್ಥಳೀಯರು ಆನೆಗೆ ಬುಲ್ಡೋಝರ್ ಎಂದು ಹೆಸರಿಟ್ಟಿದ್ದರು.