ಕಥುವಾ(ಜಮ್ಮು ಕಾಶ್ಮೀರ): ಕಾಶ್ಮೀರ ವಿಚಾರದಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿರುವ ಉಗ್ರರ ಅತಿದೊಡ್ಡ ಪ್ಲಾನ್ಗೆ ಪೊಲೀಸರು ಬ್ರೇಕ್ ಹಾಕಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಮ್ಮು-ಪಠಾಣ್ಕೋಟ್ ಹೆದ್ದಾರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಟ್ರಕ್ನಲ್ಲಿ ಆರು ಎಕೆ -47 ಗನ್ ಪತ್ತೆಯಾಗಿದೆ. ಜೊತೆಗೆ ಟ್ರಕ್ನಲ್ಲಿ ಮದ್ದುಗುಂಡು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಖಾಕಿಪಡೆ ಟ್ರಕ್ ಅನ್ನು ತಕ್ಷಣವೇ ವಶಕ್ಕೆ ಪಡೆದು ಟ್ರಕ್ನಲ್ಲಿದ್ದ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
-
SSP Kathua: A truck carrying arms and ammunition has been recovered in Kathua, more details are awaited. #JammuAndKashmir https://t.co/LRfKQi3c3P pic.twitter.com/nvVTi2AcPg
— ANI (@ANI) September 12, 2019 " class="align-text-top noRightClick twitterSection" data="
">SSP Kathua: A truck carrying arms and ammunition has been recovered in Kathua, more details are awaited. #JammuAndKashmir https://t.co/LRfKQi3c3P pic.twitter.com/nvVTi2AcPg
— ANI (@ANI) September 12, 2019SSP Kathua: A truck carrying arms and ammunition has been recovered in Kathua, more details are awaited. #JammuAndKashmir https://t.co/LRfKQi3c3P pic.twitter.com/nvVTi2AcPg
— ANI (@ANI) September 12, 2019
ವಶಕ್ಕೆ ಪಡೆಯಲಾದ ಟ್ರಕ್ ಕಾಶ್ಮೀರದಿಂದ ಪಂಜಾಬ್ ಪ್ರದೇಶಕ್ಕೆ ತೆರಳುತ್ತಿತ್ತು. ಶಂಕಿತ ಉಗ್ರರನ್ನು ವಿಚಾರಣೆ ಮಾಡಲಾಗುತ್ತಿದ್ದು, ಬಂಧಿತರು ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೇ ಅಥವಾ ಉಗ್ರರಿಗೆ ಶಸ್ತ್ರಾಸ್ತ್ರ ರವಾನೆ ಮಾಡುತ್ತಿದ್ದರೇ ಎನ್ನುವ ವಿಚಾರವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.