ETV Bharat / bharat

ಮೂರು ಬಾರಿ ಮಿಸ್​, ನಾಲ್ಕನೇ ಸಲ ಫಿಕ್ಸ್​: ತಂದೆಯನ್ನೇ ಗುಂಡಿಟ್ಟು ಕೊಂದ 15ರ ಬಾಲಕ! - ಉತ್ತರಪ್ರದೇಶದಲ್ಲಿ ಮಲ ತಂದೆಯನ್ನು ಕೊಂದ ಮಗ

ಹರೆಯದ ಹೊಸ್ತಿಲಲ್ಲಿರುವ ಬಾಲಕನೊಬ್ಬ ತನ್ನ ಮಲ ತಂದೆಯನ್ನೇ ಗುಂಡಿಟ್ಟು ಕೊಂದಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್​ಪುರ್​ನಲ್ಲಿ ನಡೆದಿದೆ.

son killed to step father, son killed to step father in UP, son killed to step father news, UP crime news, ಮಲ ತಂದೆಯನ್ನು ಕೊಂದ ಮಗ, ಉತ್ತರಪ್ರದೇಶದಲ್ಲಿ ಮಲ ತಂದೆಯನ್ನು ಕೊಂದ ಮಗ, ಉತ್ತರಪ್ರದೇಶ ಅಪರಾಧ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Jun 6, 2020, 1:27 PM IST

ಸುಲ್ತಾನ್​ಪುರ್​: ತನ್ನ ತಾಯಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎಂಬ ಕೋಪದಿಂದ ತನ್ನ ಮಲ ತಂದೆಯನ್ನೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಏನೀದು ಘಟನೆ: ಸುಲ್ತಾನ್​ಪುರ್​ ನಿವಾಸಿ 15 ವರ್ಷದ ಬಾಲಕ ಸ್ಥಳೀಯ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಕಳೆದ ವರ್ಷ ಬಾಲಕನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಳಿಕ ಅವರ ತಾಯಿ ಎರಡನೇ ವಿವಾಹ ಮಾಡಿಕೊಂಡಿದ್ದರು. ಈ ವಿಷಯ ಜೀರ್ಣಿಸಿಕೊಳ್ಳದ ಬಾಲಕ ಮನೆ ಬಿಟ್ಟು ಹೋಗಿದ್ದನು.

ಇನ್ನು ಇಷ್ಟಕ್ಕೆ ಸುಮ್ಮನಾಗದ ಬಾಲಕ ತನ್ನ ಮಲ ತಂದೆಯನ್ನು ಕೊಲ್ಲುವುದಕ್ಕೆ ಮೂರು ಬಾರಿ ಪ್ರಯತ್ನಿಸಿ ವಿಫಲವಾಗಿದ್ದಾನೆ. ಮಂಗಳವಾರ ರಾತ್ರಿ ಸಹೋದರ ಜೊತೆ ಮಲ ತಂದೆ ಬೈಕ್​ನಲ್ಲಿ ಬರುತ್ತಿರುವಾಗ ಬಾಲಕ ತನ್ನ ಮೂವರು ಸ್ನೇಹಿತರೊಡನೆ ಸೇರಿ ಅಡ್ಡಗಟ್ಟಿ ಕಬ್ಬಿಣ ರಾಡ್​ನಿಂದ ದಾಳಿ ಮಾಡಿದ್ದಾನೆ. ಅಷ್ಟಕ್ಕೆ ಬಿಡದ ಬಾಲಕ ತನ್ನ ಮಲ ತಂದೆ ಮೇಲೆ ಕತ್ತಿಯಿಂದ ದಾಳಿ ಮಾಡಿ ಗುಂಡಿಟ್ಟು ಕೊಂದಿದ್ದಾನೆ. ಈ ಘಟನೆ ನೋಡಿದ ಸಹೋದರ ಅಲ್ಲಿಂದ ಪರಾರಿಯಾಗಿದ್ದಾನೆ.

ಇನ್ನು ಬಾಲಕ ಮಲ ತಂದೆಯನ್ನು ಕೊಂದಿರುವ ಸುದ್ದಿ ತನ್ನ ತಾಯಿಗೆ ತಿಳಿಸಿದ್ದಾನೆ. ಬಳಿಕ ಬಾಲಕ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.