ETV Bharat / bharat

ರಥಯಾತ್ರೆಗೆ ಬಂದ ಗಣ್ಯರಿಗೆ ಶಾಕ್​: ಪುರಿ ದೇವಾಲಯದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ - ಪುರಿ ಜಗನ್ನಾಥ

ಪುರಿ ಜಗನ್ನಾಥ ರಥಯಾತ್ರೆ ಆರಂಭವಾಗಿದ್ದು, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಗಣ್ಯರ ಆತಿಥ್ಯ ವಹಿಸುವ ದೇಗುಲದ 1143 ಸೇವಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಓರ್ವನ ವರದಿ ಪಾಸಿಟಿವ್ ಬಂದಿದೆ.

puri
ಪುರಿ ದೇವಾಲಯ
author img

By

Published : Jun 23, 2020, 10:56 AM IST

ಪುರಿ: ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯು ಕೋವಿಡ್‌ ಭೀತಿ, ಅನೇಕ ಬಿಕ್ಕಟ್ಟುಗಳ ನಡುವೆಯೂ ಇಂದಿನಿಂದ ಪ್ರಾರಂಭವಾಗಿದೆ. ಆದರೆ, ಮೊದಲ ದಿನವೇ ದೇವಾಲಯದ ಸಿಬ್ಬಂದಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಪುರಿಯ ಜಗನ್ನಾಥ ರಥವನ್ನು 500ಕ್ಕಿಂತ ಹೆಚ್ಚು ಜನರು ಸೇರಿ ಎಳೆಯುವಂತಿಲ್ಲ. ರಥಯಾತ್ರೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ಕೋವಿಡ್​ ಟೆಸ್ಟ್​ಗೆ ಒಳಗಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ನಿನ್ನೆ ಗಣ್ಯರ ಆತಿಥ್ಯ ವಹಿಸುವ ದೇಗುಲದ 1143 ಸೇವಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಓರ್ವನ ವರದಿ ಪಾಸಿಟಿವ್ ಬಂದಿದೆ.

ಸೋಂಕಿತನನ್ನು ರಥಯಾತ್ರೆ ಆಚರಣೆ ಆರಂಭವಾಗುವ ಮೊದಲೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುರಿ ಜಿಲ್ಲಾಡಳಿತ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.