ETV Bharat / bharat

ಕೋತಿಗಳ ಕಾಟಕ್ಕೆ ಬೇಸತ್ತ ಜನ... ಈ ಮಹಿಳೆಯ ಹೊಸ ಐಡಿಯಾದಿಂದ ಗ್ರಾಮಸ್ಥರು ನಿರಾಳ

ಆಂಧ್ರ ಪ್ರದೇಶದ ತಿಮ್ಮನಪಲ್ಲೆ ಎಂಬ ಗ್ರಾಮದ ಮಹಿಳೆ ವಿರಲ ಎಂಬುವರು ತಮ್ಮ ಮುಖಕ್ಕೆ ಘೋಸ್ಟ್ ಮಾಸ್ಕ್/ ಸ್ಪೂಕಿ ಮಾಸ್ಕ್ ಧರಿಸಿ ಮಂಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

A GHOST MASK KEEPS MONKEYS AWAY
ಕೋತಿಗಳ ಕಾಟವೇ...ಇಲ್ಲಿದೆ ಹೊಸ ಐಡಿಯಾ
author img

By

Published : Sep 9, 2020, 9:40 AM IST

ಆಂಧ್ರ ಪ್ರದೇಶ: ಮಹಿಳೆಯರ ಯೋಚನೆ ಎಂಥಹದ್ದೇ ಸಮಸ್ಯೆಗಳನ್ನೂ ಸಹ ಸುಲಭವಾಗಿ ಬಗೆಹರಿಸಬಲ್ಲದು. ಹೌದು, ತಾವು ಬೆಳೆದ ಬೆಳೆಗಳ ರಕ್ಷಣೆಗೆ ಈ ಮಹಿಳೆಯ ಹೊಸ ಐಡಿಯಾ ಸಹಕಾರಿಯಾಗಿದೆ.

ರೈತರು ತಾವು ಬೆಳೆದ ಬೆಳೆಗಳ ರಕ್ಷಣೆಗಾಗಿ ಬಹಳಷ್ಟು ಶ್ರಮಿಸುತ್ತಾರೆ. ಯಾವುದೇ ಪ್ರಾಣಿ-ಪಕ್ಷಿ ಅದರಲ್ಲೂ ಮಂಗಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ಮುಂದಾಗುತ್ತಾರೆ. ಆಂಧ್ರ ಪ್ರದೇಶದ ತಿಮ್ಮನಪಲ್ಲೆ ಎಂಬ ಗ್ರಾಮದ ಮಹಿಳೆ ವಿರಲ ಎಂಬುವರು ತಮ್ಮ ಮುಖಕ್ಕೆ ಘೋಸ್ಟ್ ಮಾಸ್ಕ್/ ಸ್ಪೂಕಿ ಮಾಸ್ಕ್ ಧರಿಸಿ ಮಂಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘೋಸ್ಟ್ ಮಾಸ್ಕ್ ಧರಿಸಿ ಕೋತಿಗಳನ್ನು ಓಡಿಸಿದ ಮಹಿಳೆ

ಈ ಹಳ್ಳಿಯಲ್ಲಿ ಹೆಚ್ಚಾಗಿ ಜೋಳವನ್ನು ಬೆಳೆಯುತ್ತಾರೆ. ಆದ್ರೆ ಮಂಗಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸಿ ಗ್ರಾಮಸ್ಥರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದವು. ಹಾಗಾಗಿ ವಿರಲ 150 ರೂಪಾಯಿ ಮೌಲ್ಯದ ಸಾಮಾನ್ಯ ಭೂತ ಮುಖವಾಡ/ ಘೋಸ್ಟ್ ಮಾಸ್ಕ್ ಧರಿಸಿ ಓಡಾಡಲು ಆರಂಭಿಸಿದರು. ಇದರಿಂದ ಕೋತಿಗಳು ಹೆದರಿ ದಿಕ್ಕಾಪಾಲಾದವು. ಇದು ಈ ಹಳ್ಳಿಯ ಇತರೆ ರೈತ ವರ್ಗಕ್ಕೂ ಸಹಕಾರಿಯಾಗಿದೆ. ಕೇವಲ 150 ರೂಪಾಯಿಯ ಘೋಸ್ಟ್ ಮಾಸ್ಕ್ ಮೂಲಕ ತನ್ನ 6 ಎಕರೆ ಜೋಳದ ಹೊಲವನ್ನು ರಕ್ಷಿಸಲು ಸಾಧ್ಯವಾಯಿತು ಎಂದು ವಿರಲ ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.