ರಾಯಗಢ(ಮಹಾರಾಷ್ಟ್ರ): ರಾಯಗಢ ಜಿಲ್ಲೆಯಲ್ಲಿ 5 ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿತಗೊಂಡಿದ್ದು, ಅದರಲ್ಲಿದ್ದ 47 ಕುಟುಂಬದ 200 ಮಂದಿ ಅವಶೇಷದಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ 15 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳದಲ್ಲಿ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಪೊಲೀಸರು ಭರದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ಜನರ ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಕಳೆದ ಒಂದೇ ವಾರದಲ್ಲಿ ನಡೆದಿರುವ ಎರಡನೇ ಘಟನೆ ಇದಾಗಿದ್ದು, ಆಗಸ್ಟ್ 18ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದು ಓರ್ವ ಸಾವನ್ನಪ್ಪಿದ್ದನು.
-
3 floors of a 5-storey building collapsed in Mahad of Raigad district; over 200 people are feared trapped. 15 people have been rescued: Aditi S Tatkare, Maharashtra Minister pic.twitter.com/OWXKxfs0F2
— ANI (@ANI) August 24, 2020 " class="align-text-top noRightClick twitterSection" data="
">3 floors of a 5-storey building collapsed in Mahad of Raigad district; over 200 people are feared trapped. 15 people have been rescued: Aditi S Tatkare, Maharashtra Minister pic.twitter.com/OWXKxfs0F2
— ANI (@ANI) August 24, 20203 floors of a 5-storey building collapsed in Mahad of Raigad district; over 200 people are feared trapped. 15 people have been rescued: Aditi S Tatkare, Maharashtra Minister pic.twitter.com/OWXKxfs0F2
— ANI (@ANI) August 24, 2020
ಸಂಜೆ 6.50ರ ವೇಳೆ 5 ಅಂತಸ್ತಿನ ನಾಲ್ಕು ಕಟ್ಟಡ ಕುಸಿತಗೊಂಡಿದ್ದು, ಸತತವಾಗಿ ಸುರಿದ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮಹಾರಾಷ್ಟ್ರ ಸಚಿವ ಅದಿತಿ ಎಸ್ ತತ್ಕರೆ ಮಾಹಿತಿ ನೀಡಿದ್ದಾರೆ.