ವಿಜಯನಗರ/ಆಂಧ್ರಪ್ರದೇಶ: ಆನೆ ದಾಳಿ ನಡೆಸಿದ ಪರಿಣಾಮ ರೈತ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕೊಮರಡ ಮಂಡಲದ ಪರಶುರಾಂಪುರಂನಲ್ಲಿ ಇಂದು ನಡೆದಿದೆ.
ಲಕ್ಷ್ಮಿ ನಾಯ್ಡು ಮೃತ ರೈತ. ಲಕ್ಷ್ಮಿನಾಯ್ಡು ಬೆಳಗ್ಗೆ ಹೊಲಕ್ಕೆ ಹೋದ ಸಂದರ್ಭ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಳೆದ 3 ವರ್ಷಗಳಲ್ಲಿ ನಡೆದ ಆನೆ ದಾಳಿಯಲ್ಲಿ ಜಿಲ್ಲೆಯ 6 ಜನರು ಕೊನೆಯುಸಿರೆಳೆದಿದ್ದಾರೆ.
ಈವರೆಗೆ ಕೋಮರಡದಲ್ಲಿ ಮೂವರು, ಜಿಯಮ್ಮವಲಸದಲ್ಲಿ ಇಬ್ಬರು ಮತ್ತು ಗರುಗುಬಿಲ್ಲಿ ಮಂಡಲದಲ್ಲಿ ನಡೆದ ಆನೆ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೆಲವು ವರ್ಷಗಳಿಂದ ಆನೆಗಳು ನಿರ್ದಿಷ್ಟ ಪ್ರದೇಶಗಳಿಗೆ ಲಗ್ಗೆಯಿಟ್ಟು ಬೆಳೆ ನಾಶ ಮಾಡುತ್ತಿವೆ. ಜೊತೆಗೆ ಜೀವಹಾನಿಯೂ ಆಗಿದೆ. ಹಾಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.