ಅಸ್ಸೋಂ: ದಕ್ಷಿಣ ಭಾರತದ ಪ್ರಸಿದ್ಧ ಕ್ಯಾನ್ಸರ್ ತಜ್ಞ ಡಾ.ರವಿ ಕಣ್ಣನ್, ರೋಗಿಗಳ ಪಾಲಿಗೆ ನಿಜ ದೇವರಂತಾಗಿದ್ದಾರೆ. ಬರೀ ಮಾತಿಗಲ್ಲ ಇವರ ಪ್ರತಿ ನಡೆ ರೋಗಿಗಳ ಪಾಲಿಗೆ ಸಂಜೀವಿನಿಯಂತೆ.
2007 ರಲ್ಲಿ ಅಸ್ಸೋಂಗೆ ಬಂದಿರೋ ಡಾ. ರವಿ ಕಣ್ಣನ್ ಇಲ್ಲಿನ ರೋಗಿಗಳ ಸೇವೆ ಮಾಡ್ತಿದ್ದಾರೆ. ಸಿಲ್ಚಾರ್‌ನ ಮೆಹರ್‌ಪುರದ ಕ್ಯಾಚರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡಾ. ಕಣ್ಣನ್ ಕೆಲಸ ಮಾಡುತ್ತಿದ್ದು, ಚೆನ್ನೈನಲ್ಲಿ ಅವರು ಕೆಲಸ ಮಾಡುತ್ತಿದ್ದಾಗ ಕ್ಯಾಚರ್ ಕ್ಯಾನ್ಸರ್ ಆಸ್ಪತ್ರೆಯ ವ್ಯವಸ್ಥಾಪಕರು ಅಸ್ಸೋಂಗೆ ಬರುವಂತೆ ಆಹ್ವಾನಿಸಿದ್ದರು. ಅದಕ್ಕೆ ಇವರ ಸೇವಾತತ್ಪರತೆಯೇ ಕಾರಣ ಅನ್ನೋದನ್ನ ಬೇರೆ ಹೇಳಬೇಕಿಲ್ಲ.
ವೈದ್ಯರಿಗೆ ಸೇವೆಯೇ ಗಳಿಕೆ ಅಂತಾ ಆದ್ಮೇಲೆ ಮುಂದೆ ಯಾವುದು ಲೆಕ್ಕಕಿಲ್ಲ. ಹಾಗಾಗಿಯೇ ಕುಟುಂಬದವರ ವಿರೋಧದ ನಡುವೆಯೂ 2007ರಲ್ಲಿ ಅಸ್ಸೋಂಗೆ ಬಂದ ಡಾ.ಕಣ್ಣನ್, ಈವರೆಗೆ 70,000ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಅನೇಕ ರೋಗಿಗಳಿಗೆ ಪುನರ್ಜೀವನ ನೀಡಿದ್ದಾರೆ. ಮಾರಕ ಕಾಯಿಲೆಯಿಂದ ಬಳಲುತ್ತಿರುವವರಲ್ಲಂತೂ ಬದುಕುಳಿಯುವ ಭರವಸೆ ತುಂಬುತ್ತಿದ್ದಾರೆ.
ಈ ಆಸ್ಪತ್ರೆ ತುಂಬಾ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಅದೇ ಕಾರಣಕ್ಕೆ ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಬೆಸೆಯುತ್ತಿದೆ. ವೈದ್ಯರಂತೂ ಪ್ರತಿ ರೋಗಿಗೂ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡುತ್ತಾರೆ. ತಮ್ಮ ಕರ್ತವ್ಯವನ್ನು ದೇವರು ಕೊಟ್ಟ ಸೇವೆ ಎಂಬಂತೆ ಭಾವಿಸಿದ್ದಾರೆ. ಡಾ. ಕಣ್ಣನ್‌ರಂತಹ ಸೇವಾ ತತ್ಪರತೆಯುಳ್ಳ ವೈದ್ಯರು ನಿಜಕ್ಕೂ ಕಾಣುವ ಪ್ರತ್ಯಕ್ಷ ದೇವರೇ ಸರಿ.