ETV Bharat / bharat

ಗಂಡ-ಹೆಂಡತಿ ಜಗಳ: ಬೆಂಕಿಯಲ್ಲಿ ಬೆಂದಿದ್ದು 9 ಜನ!

ಮನ್ಶಖೇಡಿ ಗ್ರಾಮದ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, 5 ವರ್ಷದ ಬಾಲಕ ಸೇರಿ 9 ಜನರಿಗೆ ಸುಟ್ಟ ಗಂಭೀರ ಗಾಯಗಳಾಗಿವೆ ಎಂದು ರಾಘೋಘರ್ ಪೊಲೀಸರು ತಿಳಿಸಿದ್ದಾರೆ.

fire
fire
author img

By

Published : Oct 14, 2020, 10:05 AM IST

ಗುನಾ(ಮಧ್ಯಪ್ರದೇಶ): ಪತಿ ಮತ್ತು ಪತ್ನಿ ನಡುವಿನ ಜಗಳದಲ್ಲಿ ಕುಟುಂಬದ 9 ಸದಸ್ಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮನ್ಶಖೇಡಿ ಗ್ರಾಮದ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, 5 ವರ್ಷದ ಬಾಲಕ ಸೇರಿ 9 ಜನರಿಗೆ ಸುಟ್ಟ ಗಂಭೀರ ಗಾಯಗಳಾಗಿವೆ ಎಂದು ರಾಘೋಘರ್ ಪೊಲೀಸರು ತಿಳಿಸಿದ್ದಾರೆ. ವಿವಾಹಿತ ದಂಪತಿಯ ನಡುವಿನ ಕುಟುಂಬ ಕಲಹ ಜಗಳ ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ.

ನಡೆದಿದ್ದಿಷ್ಟು...

ಬದೌರಿಯಾ ಗ್ರಾಮದ ಜಿತೇಂದ್ರ ಕೆವತ್ ಎಂಬಾತ ತನ್ನ ಕುಟುಂಬ ಸದಸ್ಯರೊಂದಿಗೆ ಕುಟುಂಬ ಕಲಹದ ವಿಚಾರವಾಗಿ ಮಾತನಾಡಲು ಮನ್ಶಖೇಡಿ ಗ್ರಾಮದಲ್ಲಿರುವ ತನ್ನ ಪತ್ನಿ ಮನೆಗೆ ತೆರಳಿದ್ದಾನೆ. ಕಲಹ ಬಗೆಹರಿಸುವ ಕುರಿತು ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ಬಳಿಕ ತಾರಕಕ್ಕೇರಿದ ಮಾತಿನ ಚಕಮಕಿಯಿಂದ ಕ್ರೋಧಗೊಂಡ ಒಂದು ಕುಟುಂಬ 9 ಮಂದಿಗೆ ಬೆಂಕಿ ಹಚ್ಚಿದ್ದಾರೆ.

ಕಲಹದಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಬಾಲಕನ ಸ್ಥಿತಿ ಗಂಭೀರವಾಗಿದೆ. ಘಟನೆಗೆ ನಿಖರ ಕಾರಣ ತನಿಖೆ ನಂತರ ತಿಳಿಯಲಿದೆ ಎಂದು ರಾಘೋಘರ್ ಪೊಲೀಸ್ ಠಾಣೆ ಉಸ್ತುವಾರಿ ಮದನ್ ಮೋಹನ್ ಮಾಳ್ವಿಯಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.