ETV Bharat / bharat

ಸಿಬಿಎಸ್​ಇ ಪ್ರವೇಶ: ಗಡುವು ಮುಂದೂಡಲು ವಿದ್ಯಾರ್ಥಿಗಳು ಕೋರ್ಟ್​ ಮೊರೆ - ಸಿಬಿಎಸ್​ಇ ಪರೀಕ್ಷೆ

ಸಿಬಿಎಸ್​ಇ ವಿದ್ಯಾರ್ಥಿಗಳು ಕಾಲೇಜು ಪ್ರವೇಶಾತಿಯನ್ನು ಮುಂದೂಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಯಿಂದ ಮುಂದಿನ ವರ್ಷಕ್ಕೆ ಆರಂಭಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

extension-for-college-admissions
ಗಡುವು ಮುಂದೂಡಲು ವಿದ್ಯಾರ್ಥಿಗಳು ಕೋರ್ಟ್​ ಮೊರೆ
author img

By

Published : Aug 27, 2020, 10:46 PM IST

ನವದೆಹಲಿ: 9 ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್​ಇ) ವಿದ್ಯಾರ್ಥಿಗಳು ಕಾಲೇಜು ಪ್ರವೇಶಾತಿಯ ಗಡುವನ್ನು ಆಗಸ್ಟ್ 31 ಬದಲಿಗೆ, ಈ ವರ್ಷದ ನಂತರ ಆರಂಭಿಸುವಂತೆ ಮುಂದೂಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ) ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

extension-for-college-admissions
ಗಡುವು ಮುಂದೂಡಲು ವಿದ್ಯಾರ್ಥಿಗಳು ಕೋರ್ಟ್​ ಮೊರೆ

ಇಲ್ಲಿನ ವಿಭಾಗದ ಪರೀಕ್ಷೆಯ ಫಲಿತಾಂಶಗಳನ್ನು ಸಿಬಿಎಸ್‌ಇ ಘೋಷಿಸುವವರೆಗೆ ಪ್ರವೇಶ ದಿನಾಂಕವನ್ನು ವಿಸ್ತರಿಸಬೇಕು ಎಂದು ವಿದ್ಯಾರ್ಥಿಗಳು ಕೋರಿದ್ದಾರೆ.

ಪ್ರವೇಶ ದಿನಾಂಕವನ್ನು ವಿಸ್ತರಿಸದಿದ್ದರೆ 2020-2021ರ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ವ್ಯಾಸಂಗವನ್ನು ಮೊಟಕುಗೊಳಿಸಬೇಕಾಗುತ್ತದೆ. ಇನ್ನೂ ಕೋವಿಡ್-19 ಭೀತಿಯಿಂದಲೂ ವಿಭಾಗದ ಪರೀಕ್ಷೆಗಳನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದು ವಿದ್ಯಾರ್ಥಿಗಳ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎನ್ನಲಾಗಿದೆ.

ಈ ಹಿಂದೆ ಕಂಪಾರ್ಟ್‌ಮೆಂಟ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಇದೇ ರೀತಿಯ ಮನವಿ ಸಲ್ಲಿಸಲಾಗಿತ್ತು ಎಂದು ಎಐಎಸ್​ಎ ಸಂಘಟನೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.