ETV Bharat / bharat

85 ಬಿಎಸ್​ಎಫ್​ ಯೋಧರಿಗೆ ಕೊರೊನಾ: 154ಕ್ಕೆ ಏರಿದ ಸೋಂಕಿತರ ಸಂಖ್ಯೆ

ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಹಬ್ಬುತ್ತಿದ್ದು, ಇದೀಗ ಬಿಎಸ್​ಎಫ್​ ಯೋಧರಿಗೂ ಈ ಸೋಂಕು ಹಬ್ಬಲು ಶುರುವಾಗಿದೆ.

BSF personnel test COVID-19 positive
BSF personnel test COVID-19 positive
author img

By

Published : May 6, 2020, 3:59 PM IST

ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಈಗಾಗಲೇ ದೇಶದಲ್ಲಿ 49 ಸಾವಿರಕ್ಕೂ ಅಧಿಕ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದೀಗ ಹೆಚ್ಚುವರಿಯಾಗಿ 85 ಬಿಎಸ್​ಎಫ್​ ಯೋಧರಿಗೆ ಕೋರೋನಾ ಬಾಧಿಸಿದ್ದು ಮತ್ತಷ್ಟು ಆತಂಕ ಮೂಡಿಸಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಈಗಾಗಲೇ ದೆಹಲಿ ಬಿಎಸ್​ಎಫ್​​ ಕೇಂದ್ರ ಕಚೇರಿಯ ಎರಡು ಮಹಡಿ ಸೀಲ್‌​ಡೌನ್​ ಮಾಡಲಾಗಿದೆ. ಇದರ ಮಧ್ಯೆ 85 ಯೋಧರಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಒಟ್ಟು ಸೋಂಕಿತರ ಸಂಖ್ಯೆ 154ಕ್ಕೆ ಏರಿದೆ. ಇದರಲ್ಲಿ 37 ಯೋಧರು ತ್ರಿಪುರಾದಲ್ಲಿದ್ದರು ಎಂದು ತಿಳಿದು ಬಂದಿದೆ.

ಕೇಂದ್ರ ಮೀಸಲು ಪಡೆಯ (ಸಿಆರ್​​​ಪಿಎಫ್)​​ನ 31ನೇ ಬೆಟಾಲಿಯನ್​​ನ 64 ಯೋಧರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಹಿಂದೆ 46 ಯೋಧರಲ್ಲಿ ಕಾಣಿಸಿಕೊಂಡಿದ್ದ ಡೆಡ್ಲಿ ವೈರಸ್​​ ಕಳೆದ ಕೆಲ ದಿನಗಳ ಹಿಂದೆ ಮತ್ತೆ 18 ಜನರಲ್ಲಿ ಕಾಣಿಸಿಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.